ಕರಾವಳಿ

ಕೋಟೇಶ್ವರ: ಹೆದ್ದಾರಿಯಲ್ಲಿ ಬೈಕ್, ಮೊಬೈಲ್, ಚಪ್ಪಲಿ ಪತ್ತೆ: ಹೋಂ ಗಾರ್ಡ್ ಇನ್ನೂ ನಾಪತ್ತೆ!

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿ ಹೋಂ ಗಾರ್ಡ್ ಆಗಿರುವ ವ್ಯಕ್ತಿಯೋರ್ವರ ಬೈಕ್, ಚಪ್ಪಲಿ, ಹಾಗೂ ಮೊಬೈಲ್ ಫೋನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೋಟೇಶ್ವರ ಸ್ಮಶಾನದ ಬಳಿ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಚಂದ್ರಕಾಂತ (37) ನಾಪತ್ತೆಯಾದ ಹೋಂ ಗಾರ್ಡ್. ಕುಂಭಾಸಿ ಸಮೀಪದ ಕೊರವಡಿ ನಿವಾಸಿಯಾಗಿರುವ ಚಂದ್ರಕಾಂತ್ ಮೀನುಗಾರಿಕೆ ವ್ರತ್ತಿ ಮಾಡಿಕೊಂಡಿದ್ದಾರೆ. ಇಅವರು ಸುಮಾರು ಮೂರು ವರ್ಷದಿಂದ ಹೋಂ ಗಾರ್ಡ್ ಆಗಿದ್ದರು. ಅಪರೂಪಕ್ಕೊಮ್ಮೆ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇತ್ತೀಚೆಗೆ ನಡೆದ ಪುರಸಭೆ ಚುನಾವಣೆ ಸಂದರ್ಭ ಹೋಂ ಗಾರ್ಡ್ ಡ್ಯುಟಿ ನಿರ್ವಹಿಸಿದ್ದರು.

ಚಂದ್ರಕಾಂತ್ ಬೆಳಿಗ್ಗೆನ ಜಾವ ಮನೆಯಿಂದ ಬೈಕ್ ಏರಿ ಹೊರತೆರಳಿದ್ದರು. ಮುಂಜಾನೆ ಸುಮಾರಿಗೆ ಸಂಬಂಧಿಯೋರ್ವರು ಗಂಗೊಳ್ಳಿಗೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಕೋಟೇಶ್ವರ ಸಮೀಪ ಡಿವೈಡರ್ ಬಳಿ ಬೈಕೊಂದು ಪತ್ತೆಯಾಗಿದ್ದು ಯಾರಿಗೋ ಅಪಘಾತವಾಗಿದೆಯೆಂದು ತಿಳಿದ ಅವರು ಪರಿಶೀಲಿಸುವಾಗ ಅದು ಚಂದ್ರಕಾಂತ ಅವರದ್ದೇ ಬೈಕ್ ಆಗಿತ್ತು. ಬೈಕ್ ಬಳಿ ಮೊಬೈಲ್, ಚಪ್ಪಲಿ ಕೂಡ ಪತ್ತೆಯಾಗಿದ್ದು ಚಂದ್ರಕಾಂತ್ ಎಲ್ಲಿಯೂ ಕಂಡುಬರಲಿಲ್ಲ. ಕೂಡಲೇ ಸ್ಥಳೀಯ ಆಸ್ಪತ್ರೆಯಗೆ ತೆರಳಿ ವಿಚಾರಿಸಿದಾಗಲೂ ಕೂಡ ಅಂತಹ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿಲ್ಲ ಎಂಬ ಉತ್ತರ ಸಿಕ್ಕಿತ್ತು. ಬಳಿಕ ಚಂದ್ರಕಾಂತ್ ಸೋದರರು ಹಾಗೂ ಬಂಧುಗಳಿಗೆ ತಿಳಿಸಿ ವಿವಿದೆಡೆ ಹುಡುಕಾಟ ನಡೆಸಿ, ಬಹುತೇಕ ಆಸ್ಪತ್ರೆಗಳಲ್ಲಿ ವಿಚಾರಣೆ ನಡೆಸಿದರೂ ಕೂದ ಯಾವುದೇ ಸುಳಿವು ಈವರೆಗೂ ಲಭ್ಯವಾಗಿಲ್ಲ.

ಬೈಕ್ ಬಿದ್ದಿದ್ದ ಸ್ಥಿತಿ ಅಪಘಾತ ನಡೆದಿರಬಹುದೆಂಬ ಶಂಕೆ ಮೂಡಿಸಿದರೂ ಕೂಡ ಅಪಘಾತ ನಡೆದ ಯಾವುದೇ ಕುರುಹುಗಳು ಅಲ್ಲಿ ಲಭಿಸಿಲ್ಲ. ಬೈಕಿನ ಯಾವುದೇ ಭಾಗಕ್ಕೂ ತರಚಿಲ್ಲ. ಹಾಗದರೇ ಏನಾಯಿತು ಎಂಬುದು ಮಾತ್ರ ಇನ್ನೂ ನಿಗೂಢವೇ ಆಗಿದೆ.

ಸ್ಥಳಕ್ಕೆ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.