
ಮಂಗಳೂರು, ಸೆಪ್ಟಂಬರ್.15: ಗಣೇಶ ಚತುರ್ಥಿ ಪ್ರಯುಕ್ತ ನಗರದ ವಿವಿಧೆಡೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಗಣೇಶೋತ್ಸವ ಪ್ರಯುಕ್ತ ನಗರದ ವಿವಿಧೆಡೆ ಗಣಪನ ವಿಗ್ರಹಗಳನ್ನು ಪೂಜಿಸಲಾಯಿತು.
ಗಣೇಶನನ್ನು ನಾನಾ ರೂಪಗಳಲ್ಲಿ ಚಿತ್ರಿಸಿ ಪೂಜಿಸುವ ಪ್ರಕ್ರಿಯೆ ಎಲ್ಲೆಡೆ ವಿಜೃಂಭನೆಯಿಂದ ನಡೆಯಿತು. ಕೆಲವು ಕಡೆ ಪರಿಸರ ಸ್ನೇಹಿಯಾದ ಮಣ್ಣಿನ ಚಿಕ್ಕ ಚಿಕ್ಕ ಗಣಪನನ್ನು ರೂಪಿಸಿ ಆಚರಿಸಲಾಯಿತು.

Akshaya_Hall_Ganapati

Bejai_Ganapati

bockpatna_Ganapati

Bunts_Hostel_Ganapati Kannuru_Ganapati

Karnglpadi_Ganapati KSRTC_Ganapat

Maroli_Ganapati Neharu_Maidan_Ganapati

Sanganiketana_Ganapati
ನಗರದ ಶರವು ದೇವಸ್ಥಾನ, ನೆಹರೂ ಮೈದಾನ, ಕೆಎಸ್ಆರ್ಟಿಸಿ, ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಪೊಲೀಸ್ ಲೇನ್, ಜಪ್ಪಿನಮೊಗರು ಮತ್ತಿತರ ಕಡೆ ಗಣೇಶನ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಕೆಲವು ಸಂಘಟನೆಗಳ ಗಣೇಶೋತ್ಸವವು 50ರ ಸಂಭ್ರಮ ದಾಟಿದ ಹಿನ್ನೆಲೆಯಲ್ಲಿ ವಿಜೃಂಭನೆ ಕಂಡು ಬಂತು. ಹಬ್ಬದ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
Comments are closed.