ರಾಷ್ಟ್ರೀಯ

ಸೈಬರ್ ಕ್ರಿಮಿನಲ್‌ಗಳಿಂದ ಪೋರ್ನ್ ಸ್ಟಾರ್ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಡಿಮ್ಯಾಂಡ್!

Pinterest LinkedIn Tumblr

ಲಖನೌ: ಉತ್ತರ ಪ್ರದೇಶದ ಸೈಬರ್ ಕ್ರಿಮಿನಲ್‌ಗಳೀಗ ಮುಗ್ಧ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ನೀಲಿಚಿತ್ರಗಳಲ್ಲಿ ಸ್ಟಾರ್ ಮಾಡುತ್ತೇವೆ, ಎಂದು ಆಮಿಷ ಒಡ್ಡಿ ಸ್ಪ್ಯಾಮ್ ಫೋನ್ ಕರೆಗಳ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ವೇಶ್ಯಾವಾಟಿಕೆ ಏಜೆಂಟ್‌ಗಳನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ನೋಂದಣಿ ಶುಲ್ಕವಾಗಿ ಸಾವಿರಾರು ರೂಪಾಯಿಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ.

ಲಖನೌನ ಪ್ರತಿಷ್ಠಿತ ಕಾಲೇಜೊಂದರ ವಾಣಿಜ್ಯ ವಿದ್ಯಾರ್ಥಿಯೊಬ್ಬ ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದ್ದು. ಸೈಬರ್ ಕ್ರಿಮಿನಲ್ ಗ್ಯಾಂಗ್ ಸದಸ್ಯೆಯೊಬ್ಬಳು ತನಗೆ ಕರೆ ಮಾಡಿ ಏಜೆಂಟ್ ಆಗುವಂತೆ , ನೋಂದಣಿ ಶುಲ್ಕವಾಗಿ 9510 ರೂಪಾಯಿ ಡೆಪಾಸಿಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಅನೇಕ ಬಾರಿ ನನಗೆ ಕರೆ ಬಂದಿದ್ದು, ಅವರದು ವಂಚನೆಯ ಜಾಲ ಎಂದು ಅರ್ಥವಾದ ಬಳಿಕ ದೂರು ನೀಡಲು ಬಂದೆ ಎಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಹೇಳಿದ್ದಾನೆ.

ಕರೆಗೆ ಸ್ಪಂದಿಸಿ ಏಜೆಂಟ್ ಆಗಲು ಒಪ್ಪಿಕೊಡರೆ ಬಳಿಕ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ. ಎಸ್ಕಾರ್ಟ್ ಏಜೆಂಟ್ ಆಗಿ ಉತ್ತಮವಾಗಿ ಕೆಲಸ ಮಾಡಿದರೆ ಬಳಿಕ ಅವರಿಗೆ ವಿದೇಶಿ ಸಿನಿಮಾಗಳಲ್ಲಿ ಪೋರ್ನ್ ಸ್ಟಾರ್ ಆಗಿ ಬಡ್ತಿ ನೀಡಲಾಗುತ್ತದೆ. ಆಗ ಸುಲಭವಾಗಿ ಒಂದು ಸಿನಿಮಾಕ್ಕೆ 1.5 ಲಕ್ಷದಿಂದ 2 ಲಕ್ಷದವರೆಗೆ ಸಂಭಾವನೆ ಪಡೆಯಬಹುದು ಎಂದು ಆಮಿಷ ಒಡ್ಡಲಾಗುತ್ತದೆ ಎಂದು ವಿದ್ಯಾರ್ಥಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ತನಿಖೆಯನ್ನು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸೈಬರ್ ಠಾಣೆ ನೋಡಲ್ ಆಫೀಸರ್ ಅಭಯ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Comments are closed.