ಬೆಂಗಳೂರು: ತೈಲ ದರ ಏರಿಕೆ ಖಂಡಿಸಿ ಸೋಮವಾರ ಭಾರತ್ ಬಂದ್ ಕರೆಕೊಡಲಾಗಿದ್ದು ರಾಜ್ಯದಲ್ಲಿ ಈ ಬಂದ್ ಬಹುತೇಕ ಯಶಸ್ವಿಯಾಗಿದೆ. ಆದರೆ ಈ ಮುಷ್ಕರದಿಂದಾಗಿ ರಾಜ್ಯದ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು ಅಂತಾ ತಿಳಿದ್ರೆ ದಂಗಾಗಿ ಹೋಗ್ತಿರಿ. ಇಲಾಖೆಗೆ ಆದ ನಷ್ಟದ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಮಂಡ್ಯದಲ್ಲಿ ಹೇಳಿದ್ದು ಹೀಗೆ…..

ನಾಲ್ಕು ವಿಭಾಗಗಳಿಂದ 25 ಸಾವಿರ ಬಸ್ಗಳಿದ್ದು, ಸಾರಿಗೆ ಇಲಾಖೆಗೆ ನೂರಾರು ಕೋಟಿ ನಷ್ಟ ಉಂಟಾಗಿದೆ. ಆದರೆ ಒಳ್ಳೆಯ ಉದ್ದೇಶಕ್ಕಾಗಿ ಬಂದ್ ಮಾಡಲಾಗುತ್ತಿರುವುದರಿಂದ ಬಂದ್ಗೆ ಬೆಂಬಲ ನೀಡಿದ್ದೇವೆ. ಈ ಹಿಂದೆ ಮೋದಿ ಸರ್ಕಾರ ಬರುವ ಮುನ್ನ ವರ್ಷದ ಒಂದು ಬಾರಿ ಇಲ್ಲ ಎರಡು ಬಾರಿ ದರ ಏರಿಕೆಯಾಗುತಿತ್ತು. ಕೇಂದ್ರ ಸರ್ಕಾರ ಪ್ರತಿ ದಿನ ಪೈಸೆ ಲೆಕ್ಕದಲ್ಲಿ ತೈಲ ಬೆಲೆ ಏರಿಸುತ್ತಿದೆ. ಹೀಗಾಗಿ ಬಸ್ ದರ ಏರಿಕೆ ಮಾಡಬೇಕಾಗಿದೆ. ಸಾರಿಗೆ ಸಂಸ್ಥೆಗಳಿಂದ ವರ್ಷಕ್ಕೆ ಆರುನೂರು ಕೋಟಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಇದೇ ತಿಂಗಳು 16ರ ನಂತರ ಬಸ್ ದರ ಏರಿಕೆಯಾಗಲಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.
Comments are closed.