ಕರಾವಳಿ

ವಿಶ್ವ ಬಂಟರ ಸಮ್ಮಿಲನ-2018; ಬಂಟ ಸಮಾಜದ ಅಶಕ್ತರಿಗೆ ನೆರವಾಗೋಣ: ನ್ಯಾ| ಸಂತೋಷ್ ಹೆಗ್ಡೆ

Pinterest LinkedIn Tumblr

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಡುಪಿ ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ಭಾನುವಾರ ನಡೆದ ವಿಶ್ವ ಬಂಟರ ಸಮ್ಮಿಲನಕ್ಕೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಮಂದಿ ಆಗಮಿಸಿದ್ದರು.

ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಸಮಾಜದಲ್ಲಿನ ಬಡವರು ಮತ್ತು ಅಶಕ್ತರಿಗೆ ಬಂಟ ಸಂಘಟನೆ ನೆರವಾಗುವ ಮೂಲಕ ಅವರನ್ನು ಸಮಾಜದಲ್ಲಿ ಮೇಲ್ಸ್ತರಕ್ಕೆ ಬರಲು ಸಹಕಾರ ನೀಡಬೇಕು. ಸಮಾಜ ಒಗ್ಗಾಟ್ಟಿನಿಂದ ಮುಂದುವರಿದಾಗ ಮಾತ್ರವೇ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಸಿಗಲಿದೆ. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಕೂಡ ಬದುಕಲು ನೆರವಾಗುವಂತಹ ವ್ಯವಸ್ಥೆ ಸ್ರಷ್ಟಿಯಾಗಬೇಕಿದೆ ಎಂದರು.

ಬಾರಕೂರು ಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಆಕರ್ಷಕ ವೇದಿಕೆ..ವಿಶೇಷ ಎಲ್ಲವೂ..!
ಸಮ್ಮೇಳನಕ್ಕಾಗಿಯೇ ನಿರ್ಮಿಸಿದ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ವೇದಿಕೆಯನ್ನು ಬೃಹತ್‌ ಗುತ್ತು ಮನೆಯಂತೆ ನಿರ್ಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಈ ವೇದಿಕೆಯನ್ನು ಶಶಿರೇಖಾ ಮತ್ತು ಆನಂದ ಶೆಟ್ಟಿಯವರು ಉದ್ಘಾಟಿಸಿದರು. ಪುರುಷರೆಲ್ಲ ಧೋತಿ, ಬಿಳಿ ಅಂಗಿ, ಶಾಲುಗಳನ್ನು ಧರಿಸಿದ್ದರೆ, ಬೇರೆ ಬೇರೆ ಸಂಘಟನೆಗಳ ಮಹಿಳೆಯರು ಒಂದೇ ರೀತಿಯ ಬಣ್ಣದ ಸೀರೆಗಳನ್ನು ಧರಿಸಿದ್ದರು. ದೈವಗಳ ಮುಖವಾಡ, ಬಂಟರ ಸಾಂಸ್ಕೃತಿಕ ಮೇಲ್ಮೆ ಎನಿಸಿದ ಭತ್ತದ ತಿರಿ, ಅಕ್ಕಿಮುಡಿ, ಊರಿನ ಕೋಳಿ, ತೆರೆದ ಬಾವಿ, ದೈವದ ಮನೆಗಳು ಜನಾಕರ್ಷಣೆಯಾಗಿದ್ದವು. ಉದ್ಯಮಿ ಮನೋಹರ ಶೆಟ್ಟಿಯವರ ಸಂಗ್ರಹದಲ್ಲಿರುವ ಹಳೆಯ ಎರಡು ಕಾರುಗಳನ್ನು ಸಮ್ಮೇಳನದ ಆವರಣದಲ್ಲಿತ್ತು

ಸಾಧಕರಿಗೆ ಸಮ್ಮಾನ
ಬೈಂದೂರು ಬಂಟರ ಸಂಘದ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ, ಬೆಳಗಾವಿ ಉದ್ಯಮಿ ಬಾರಕೂರು ವಿಠ್ಠಲ ಹೆಗ್ಡೆ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಮಂಗಳೂರಿನ ದೇವಿ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಸದಾನಂದ ಶೆಟ್ಟಿ, ಹಿರಿಯ ಸಂಸ್ಕೃತಿತಜ್ಞ, ಸಾಹಿತಿ ಡಾ|ಏರ್ಯ ಲಕ್ಷ್ಮೀನಾರಾಯಣ ಆಳ್ವ, ಯಕ್ಷಗಾನ ವಿದ್ವಾಂಸ ಡಾ| ಶಿಮಂತೂರು ನಾರಾಯಣ ಶೆಟ್ಟಿ, ಕಾಸರಗೋಡಿನ ಸಂಘಟಕ ದಾಸಣ್ಣ ಆಳ್ವ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಕಾಪುವಿನ ಡಾ|ಪ್ರಭಾಕರ ಶೆಟ್ಟಿ, ಮುಂಬೈ ಉದ್ಯಮಿ ಮೈನಾ ಸುಬ್ಬಣ್ಣ ಶೆಟ್ಟಿ, ಯುಎಇ ಉದ್ಯಮಿ ಸರ್ವೋತ್ತಮ ಶೆಟ್ಟಿ, ಸಮಾಜ ಸೇವಕ ಕಾಪು ವಿಶ್ವನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸದಾನಂದ ಶೆಟ್ಟಿ ಮತ್ತು ಸರ್ವೋತ್ತಮ ಶೆಟ್ಟಿಯವರು ಸಮ್ಮಾನಿತರ ಪರವಾಗಿ ಮಾತನಾಡಿ ಸಮ್ಮೇಳನದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಗಡಿ ಪ್ರಧಾನ ಸಮ್ಮಿಲನದಲ್ಲಿ ಒಟ್ಟು 67 ಮಂದಿ ಗಡಿಪ್ರಧಾನ ಹೊಂದಿದ ಗಡಿಕಾರರನ್ನು ಗೌರವಿಸಲಾಯಿತು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಜಿತ್ ಕುಮಾರ್ ರೈ ಮಾಲಾಡಿ, ಸುಧಾಕರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮೊದಲಾದವರಿದ್ದರು.

ತುಳು ಸಿನೆಮಾದಲ್ಲಿ ನಟನೆ: ಸುನೀಲ್ ಶೆಟ್ಟಿ
ಸಮುದಾಯದ ಬಡ ಮಕ್ಕಳಿಗಾಗಿ ತುಳು ಸಿನೆಮಾದಲ್ಲಿ ನಟಿಸಲು ಸಿದ್ದನಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದರು. ಸಿನೆಮಾ ಮತ್ತು ಧಾರಾವಾಹಿ ಕಲಾವಿದರ ಸಮ್ಮಿಲನ ವಿಶೇಶ ಕಾರ್ಯಕ್ತ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ನಟಿಸುವ ತುಳು ಸಿನೆಮಾದಲ್ಲಿ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿಯವರ ಸಹಕಾರವನ್ನು ಕೋರಲಿರುವೆ ಎಂದರು. ಸಿಐಡಿ ಧಾರಾವಾಹಿಯ ನಟ ದಯಾ ಶೆಟ್ಟಿ, ಖ್ಯಾತ ಕಲಾವಿದರಾದ ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಆವಂತಿಕಾ ಶೆಟ್ಟಿ, ಆಶ್ರಿತಾ ಶೆಟ್ಟಿ, ಹರೀಶ್ ವಾಸು ಶೆಟ್ಟಿ ಮೊದಲಾದವರಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಲೋಕಾಯುಕ್ತ ವಿಶ್ವನಾಥ ಶೆಟ್ಟಿ, ಸಂಘಟನೆ ಪ್ರಮುಖರಾದ ಎಂ.ಆರ್.ಜಿ ಗ್ರೂಓ ಪ್ರಕಾಶ್ ಶೆಟ್ಟಿ, ತೋನ್ಸೆ ಶಶಿಕಲಾ ಶೆಟ್ಟಿ, ಆನಂದ ಶೆಟ್ಟಿ, ಕೆ.ಡಿ ಶೆಟ್ಟಿ, ಕೆ.ಎಂ ಶೆಟ್ಟಿ, ಬಿ.ವಿ. ಶೆಟ್ಟಿ ಮುಂಬೈ, ಶಾಸಕರಾದ ಡಾ. ಭಾರತ್ ಶೆಟ್ಟಿ, ಹರೀಶ್ ಪೂಂಜಾ, ಮಾಹೆ ವಿ.ವಿ. ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ರವಿ ಶೆಟ್ಟಿ, ಮನೋಹರ ಶೆಟ್ಟಿ, ಮುಂಬೈ ಸಂಘದ ಸುಧಾಕರ ಹೆಗ್ಡೆ, ರತ್ನಾಕರ ಶೆಟ್ಟಿ, ವಿವೇಕ್ ಶೆಟ್ಟಿ, ಶಿವಾನಂದ ಶೆಟ್ಟಿ, ಬೋಳ ಸುಬ್ಬಯ್ಯ ಶೆಟ್ಟಿ. ಅನಿವಾಸಿ ಭಾರತೀಯ ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸುಶೀರ್ ಕುಮಾರ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರವಿ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಮೊದಲಾದವರಿದ್ದರು.

Comments are closed.