ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ 3 ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ : ಸೆ.3ರಂದು 250 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Pinterest LinkedIn Tumblr

ಮಂಗಳೂರು : ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ, ಬಂಟ್ವಾಳ ಪುರಸಭೆ ಮೂರು ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಪುತ್ತೂರಿನಲ್ಲಿ ಶೇಖಡ 68.69 ಮತದಾನ, ಉಳ್ಳಾಲದಲ್ಲಿ ಶೇಖಡ 65.36 ಮತದಾನ ಹಾಗೂ ಬಂಟ್ವಾಳದಲ್ಲಿ ಶೇಖಡ 72.36 ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಶೇಖಡ 68.50 ಮತದಾನವಾಗಿದೆ.

ಒಟ್ಟು 89 ವಾರ್ಡ್‌ಗಳ 1,17,979 ಮತದಾರರು 89 ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಕಣದಲ್ಲಿ ಒಟ್ಟು 250 ಅಭ್ಯರ್ಥಿಗಳಿದ್ದಾರೆ. ಉಳ್ಳಾಲದ 31 ವಾರ್ಡ್‌ಗಳಲ್ಲಿ 102 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 44,132 ಮತದಾರರಿದ್ದಾರೆ. ಪುತ್ತೂರಿನ 31 ವಾರ್ಡ್‌ಗಳಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದು, 39,745 ಮತದಾರರಿದ್ದಾರೆ. ಬಂಟ್ವಾಳದ 27 ವಾರ್ಡ್ ಗಳಲ್ಲಿ 71 ಅಭ್ಯರ್ಥಿಗಳು ಕಣದಲ್ಲಿದ್ದು, 34,102 ಮತದಾರರಿದ್ದಾರೆ.

ಉಳ್ಳಾಲದಲ್ಲಿ 18 ಅತಿ ಸೂಕ್ಷ್ಮ ಮತ್ತು 11 ಸೂಕ್ಷ್ಮ ಸಹಿತ 43 ಮತಗಟ್ಟೆಗಳಿವೆ. ಪುತ್ತೂರಿನಲ್ಲಿ 27 ಸೂಕ್ಷ್ಮ(ಅತಿ ಸೂಕ್ಷ್ಮ ಇಲ್ಲ) ಸಹಿತ 41 ಮತಗಟ್ಟೆಗಳಿವೆ. ಬಂಟ್ವಾಳದಲ್ಲಿ 18 ಅತಿ ಸೂಕ್ಷ್ಮ ಮತ್ತು 14 ಸೂಕ್ಷ್ಮ ಸಹಿತ 32 ಮತಗಟ್ಟೆಗಳಿವೆ.

ಮೂರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಒಟ್ಟು 145 ಮತ ಯಂತ್ರಗಳನ್ನು ಬಳಕೆ ಮಾಡಲಾಗಿದೆ. ಅಲ್ಲದೆ 145 ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್‌ಗಳನ್ನೂ ಕೂಡಾ ಅಳವಡಿಸಲಾಗಿದೆ.

ಚುನಾವಣೆಗೆ ಮತಯಂತ್ರ ಬಳಸುವುದರಿಂದ ಅಭ್ಯರ್ಥಿಗಳ ಪೈಕಿ ಯಾರೊಬ್ಬರಿಗೂ ಮತ ಚಲಾಯಿಸಲು ಇಚ್ಛಿಸದಿರುವ ಮತದಾರರು ಮತಯಂತ್ರದಲ್ಲಿ ಅಳವಡಿಸಿರುವ ನೋಟಾಕ್ಕೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

ಬಂಟ್ವಾಳದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಪಕ್ಷಗಳ ನಡುವೆ ಹಣಾಹಣಿ :

ಬಂಟ್ವಾಳ ಪುರಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಬೆಳಗ್ಗೆ ಆರಂಭಗೊಂಡಿದ್ದು, 27 ವಾರ್ಡುಗಳ 32 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. ಪಕ್ಷಗಳ ನಡುವೆ ಹಣಾಹಣಿ ನಡೆಯಲಿದೆ.

ಬಂಟ್ವಾಳ ಪುರಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್‍ನ 25, ಬಿಜೆಪಿಯ 27, ಜೆಡಿಎಸ್‍ನ 5, ಎಸ್‍ಡಿಪಿಐನ 12, ಸಿಪಿಐ 1, ಪಕ್ಷೇತರ 1 ಸೇರಿ ಒಟ್ಟು 71 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಸಿಪಿಐ 1 ಸ್ಥಾನದಲ್ಲಿ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲದೊಂದಿಗೆ ನಿಲ್ಲಿಸಿದೆ.

ಬೆಳಗ್ಗಿನ ಅವಧಿಯಲ್ಲಿ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಕೆಲ ವಾರ್ಡ್ ಗಳ ಮತಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಿಬ್ಬಂದಿಗಳಾದ ಶಿವಾನಂದ ನಾಟೇಕರ್, ಸದಾಶಿವ ಕೈಕಂಬ, ಅಶೋಕ್ ಮತ್ತಿತರಿದ್ದರು.

ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಚುನಾವಣಾಧಿಕಾರಿಗಳ ತಂಡ ಮತದಾನ ಪ್ರಕ್ರಿಯೆ ಮೇಲೆ ನಿಗಾ ಇರಿಸಿದ್ದರೆ, ಎಎಸ್ಪಿ ಹೃಷಿಕೇಶ್ ಸೋನಾವಣೆ ನೇತೃತ್ವದಲ್ಲಿ ಬಂಟ್ವಾಳ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ಬಂಟ್ವಾಳ ಪುರಸಭಾ ಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಮತಗಟ್ಟೆಗಳ ವಿವರ :

ವಾರ್ಡ್ 1-ಲೊರೆಟ್ಟೊಪದವು: ಬಿ.ವಾಸುಪೂಜಾರಿ (ಕಾಂಗ್ರೆಸ್), ಚಂದ್ರಶೇಖರ ಪೂಜಾರಿ (ಬಿಜೆಪಿ), ರಿಯಾಝ್ ಲೊರೆಟ್ಟೊಪದವು (ಎಸ್‍ಡಿಪಿಐ) ಅಭ್ಯರ್ಥಿಗಳು. ಅಗ್ರಾರ್ ಕ್ರಿಸ್ತಜ್ಯೋತಿ ಪ್ರೌಢಶಾಲೆಯಲ್ಲಿ ಎರಡು ಮತಗಟ್ಟೆಗಳು.

ವಾರ್ಡ್ 2-ಮಂಡಾಡಿ: ಗಂಗಾಧರ ಪೂಜಾರಿ ಮಂಡಾಡಿ (ಕಾಂಗ್ರೆಸ್), ಬಿ.ದಿನೇಶ ಭಂಡಾರಿ (ಬಿಜೆಪಿ) ಅಭ್ಯರ್ಥಿಗಳು, ಮಂಡಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ.
ವಾರ್ಡ್ 3-ಮಣಿ: ಹೇಮಾವತಿ (ಕಾಂಗ್ರೆಸ್), ಮೀನಾಕ್ಷೀ ಜೆ.ಗೌಡ (ಬಿಜೆಪಿ). ಅಗ್ರಾರ್ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗಳು.

ವಾರ್ಡ್ 4-ಕಾಲೇಜು ರಸ್ತೆ: ಪ್ರತಿಮಾ ರವಿಕುಮಾರ್ (ಕಾಂಗ್ರೆಸ್), ರೇಖಾ ರಮಾನಾಥ ಪೈ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಅತೀ ಸೂಕ್ಷ್ಮ ಮತಗಟ್ಟೆ.

ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್), ವಿಶ್ವನಾಥ ಚಂಡ್ತಿಮಾರ್ (ಬಿಜೆಪಿ) ಅಭ್ಯರ್ಥಿಗಳು. ಜಕ್ರಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿರುವ ಮತಗಟ್ಟೆ.

ವಾರ್ಡ್ 6-ಹೊಸ್ಮರ್: ಜಯಂತಿ ಸೋಮಪ್ಪ ಪೂಜಾರಿ (ಕಾಂಗ್ರೆಸ್), ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 7-ಬಂಟ್ವಾಳ ಪೇಟೆ: ಧನವಂತಿ ಮಹಾಬಲ ಬಂಗೇರ (ಕಾಂಗ್ರೆಸ್), ಶಶಿಕಲಾ ಪ್ರಭಾಕರ್ (ಬಿಜೆಪಿ) ಅಭ್ಯರ್ಥಿಗಳು. ಎಸ್‍ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 8-ಕೆಳಗಿನಪೇಟೆ: ಮುಹಮ್ಮದ್ ಸಗೀರ್ ಬಿ.ಎಲ್ (ಕಾಂಗ್ರೆಸ್), ಮುನೀಶ್ ಅಲಿ ಮಹಮ್ಮದ್ (ಎಸ್‍ಡಿಪಿಐ), ಉಮರಬ್ಬ (ಬಿಜೆಪಿ), ಹಾರೂನ್ ರಶೀದ್ (ಜೆಡಿಎಸ್) ಅಭ್ಯರ್ಥಿಗಳು. ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ.

ವಾರ್ಡ್ 9-ಭಂಡಾರಿಬೆಟ್ಟು: ಜಗದೀಶ್ ಕುಂದರ್ (ಕಾಂಗ್ರೆಸ್), ಹರಿಪ್ರಸಾದ್ (ಬಿಜೆಪಿ) ಅಭ್ಯರ್ಥಿಗಳು. ಭಂಡಾರಿಬೆಟ್ಟು ಶ್ರೀ ವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ದಕ್ಷಿಣ ಭಾಗದ ಮತಗಟ್ಟೆ.

ವಾರ್ಡ್ 10-ಕಾಮಾಜೆ: ವನಜಾಕ್ಷಿ ಬಿ. ಶೇಖರ (ಸಿಪಿಐ-ಕಾಂಗ್ರೆಸ್ ಬೆಂಬಲಿತ), ಶೋಭಾ,ಹರಿಶ್ಚಂದ್ರ (ಬಿಜೆಪಿ) ಅಭ್ಯರ್ಥಿಗಳು. ಭಂಡಾರಿಬೆಟ್ಟು ಶ್ರೀವೆಂಕಟರಮಣ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಭಾಗದ ಮತಗಟ್ಟೆ.

ವಾರ್ಡ್ 11-ಸಂಚಯಗಿರಿ: ಸುಜಾತಾ ಎಸ್.ಅಮೀನ್ (ಕಾಂಗ್ರೆಸ್), ಜಯಂತಿ ವಸಂತ ಕುಲಾಲ್ (ಬಿಜೆಪಿ) ಅಭ್ಯರ್ಥಿಗಳು. ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜುವಿನ ದಕ್ಷಿಣ ಭಾಗದ ಮತಗಟ್ಟೆ.

ವಾರ್ಡ್ 12-ಅಜ್ಜಿಬೆಟ್ಟು: ವಸಂತಿ (ಜೆಡಿಎಸ್-ಕಾಂಗ್ರೆಸ್ ಬೆಂಬಲಿತ), ವಿದ್ಯಾವತಿ ಪ್ರಮೋದ್

ಕುಮಾರ್ (ಬಿಜೆಪಿ) ಅಭ್ಯರ್ಥಿಗಳು. ಬಿ.ಮೂಡ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದಕ್ಷಿಣ ಭಾಗದಲ್ಲಿರುವ ಮತಗಟ್ಟೆ.

ವಾರ್ಡ್ 13-ಗೂಡಿನಬಳಿ: ನೆಫಿಸಾ ಹನೀಫ್ (ಕಾಂಗ್ರೆಸ್), ಸಂಶಾದ್ (ಎಸ್‍ಡಿಪಿಐ), ಕೌಸರ್
ಬಾನು (ಬಿಜೆಪಿ) ಅಭ್ಯರ್ಥಿಗಳು. ಗೂಡಿನಬಳಿಯ ಹಯಾತುಲ್ ಇಸ್ಲಾಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ.

ವಾರ್ಡ್ 14-ಜೋಡುಮಾರ್ಗ-ಕೈಕುಂಜೆ: ಕೆ. ಸುಗುಣ ಕಿಣಿ (ಬಿಜೆಪಿ), ಶೆಹನಾಝ್ ರಹೀಂ (ಕಾಂಗ್ರೆಸ್), ಝೀನತ್ ಫಿರೋಜ್ (ಎಸ್‍ಡಿಪಿಐ) ಅಭ್ಯರ್ಥಿಗಳು. ಈ ವಾರ್ಡಿನ ಎಪಿಎಂಸಿ ಕಚೇರಿ ಜೋಡುಮಾರ್ಗ ಮತಗಟ್ಟೆ ಅತೀಸೂಕ್ಷ್ಮವಾದರೆ, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಕೈಕುಂಜ ಸೂಕ್ಷ್ಮಮತಗಟ್ಟೆ.

ವಾರ್ಡ್ 15-ಎಪಿಎಂಸಿ ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ), ಲೋಕೇಶ್ ಸುವರ್ಣ (ಕಾಂಗ್ರೆಸ್), ಅಭ್ಯರ್ಥಿಗಳು. ಈ ವಾರ್ಡಿಗೆ ಅಜ್ಜಿಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಪೂರ್ವಭಾಗದ ಮತಗಟ್ಟೆ.

ವಾರ್ಡ್ 16-ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್), ಶಾಹುಲ್ ಹಮೀದ್ ಎಸ್.ಎಚ್ (ಎಸ್‍ಡಿಪಿಐ), ಸಲಿಮ್ (ಬಿಜೆಪಿ) ಅಭ್ಯರ್ಥಿಗಳು. ಸರಕಾರಿ ಪದವಿಪೂರ್ವ ಕಾಲೇಜು ಹೈಸ್ಕೂಲ್ ವಿಭಾಗ ಅಜ್ಜಿಬೆಟ್ಟಿನ ಬಿ.ಮೂಡ ಪೂರ್ವ ಭಾಗದ ಮತಗಟ್ಟೆ.

ವಾರ್ಡ್ 17-ಪರ್ಲಿಯಾ: ಅಬ್ದುಲ್ ಖಾದರ್ ಇಕ್ಬಾಲ್ (ಪಕ್ಷೇತರ), ಲುಕ್ಮಾನ್ (ಕಾಂಗ್ರೆಸ್), ಮಹಮ್ಮದ್ ಇಕ್ಬಾಲ್ ಮದ್ದಾ (ಎಸ್‍ಡಿಪಿಐ), ಅನಂತ ಕೃಷ್ಣ ನಾಯಕ್ (ಬಿಜೆಪಿ) ಅಭ್ಯರ್ಥಿಗಳು. ಕೊಡಂಗೆ ಶಾಲೆಯ ಮತಗಟ್ಟೆ.

ವಾರ್ಡ್ 18-ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್), ಬಶೀರ್ ಪಲ್ಲ (ಎಸ್‍ಡಿಪಿಐ), ಮಹೇಶ ಶೆಟ್ಟಿ(ಬಿಜೆಪಿ) ಅಭ್ಯರ್ಥಿಗಳು. ಕೊಡಂಗೆ ಬಿ.ಮೂಡ ದ.ಕ.ಜಿಪಂ ಹಿ.ಪ್ರಾ.ಶಾಲೆ ಮತಗಟ್ಟೆ.

ವಾರ್ಡ್ 19-ಅದ್ದೇಡಿ: ಮುಹಮ್ಮದ್ ಶರೀಫ್ (ಕಾಂಗ್ರೆಸ್), ಇಸಾಕ್ ಶಾಂತಿಯಂಗಡಿ (ಎಸ್‍ಡಿಪಿಐ), ಶೇಕ್ ಶಾಹಿದ್ ಹುಸೇನ್ (ಬಿಜೆಪಿ) ಅಭ್ಯರ್ಥಿಗಳು. ದ.ಕ.ಜಿಪಂ ಹಿ.ಪ್ರಾ.ಶಾಲೆ ಕೊಡಂಗೆ ಬಿ.ಮೂಡದಲ್ಲಿರುವ ಮತಗಟ್ಟೆ.

ವಾರ್ಡ್ 20-ಮೊಡಂಕಾಪು: ಲೋಲಾಕ್ಷ ಶೆಟ್ಟಿ (ಕಾಂಗ್ರೆಸ್), ಲತೀಫ್ ಕೆ.ಎಚ್ (ಎಸ್‍ಡಿಪಿಐ), ಎಂ. ಸತೀಶ್ ಶೆಟ್ಟಿ (ಬಿಜೆಪಿ) ಅಭ್ಯರ್ಥಿಗಳು. ದೀಪಿಕಾ ಪ್ರೌಢಶಾಲೆ ಮೊಡಂಕಾಪು ಮತಗಟ್ಟೆ.

ವಾರ್ಡ್ 21-ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್), ರಾಮಣ್ಣ ಶೆಟ್ಟಿ (ಎಸ್‍ಡಿಪಿಐ), ಪುಷ್ಪರಾಜ್ ಶೆಟ್ಟಿ (ಬಿಜೆಪಿ), ಅಭ್ಯರ್ಥಿಗಳು. ದೀಪಿಕಾ ಹೈಸ್ಕೂಲು ಮೊಡಂಕಾಪು ದ.ಭಾಗ, ಉತ್ತರ ಭಾಗ ಎಂದು ಇಲ್ಲಿ ಎರಡು ಮತಗಟ್ಟೆಗಳಿವೆ.

ವಾರ್ಡ್ 22-ಪಲ್ಲಮಜಲು: ನಳಿನಾಕ್ಷಿ ಆನಂದ ಕುಲಾಲ್ (ಕಾಂಗ್ರೆಸ್), ಚೈತನ್ಯ ಎ.ದಾಸ್ (ಬಿಜೆಪಿ), ಅಭ್ಯರ್ಥಿಗಳು. ಬಿ.ಮೂಡ ಪಲ್ಲಮಜಲು ಶಾಲೆಯ ಮತಗಟ್ಟೆ.

ವಾರ್ಡ್ 23-ಜೈನರಪೇಟೆ: ಮುಹಮ್ಮದ್ ನಿಸಾರ್ (ಕಾಂಗ್ರೆಸ್), ಇದ್ರೀಸ್ ಪಿ.ಜೆ (ಎಸ್‍ಡಿಪಿಐ), ಲಕ್ಷಣ್ ರಾಜ್ ಪಿ.ವಿ (ಬಿಜೆಪಿ), ಶಫೀಕ್ (ಜೆಡಿಎಸ್), ಅಭ್ಯರ್ಥಿಗಳು. ಪಾಣೆಮಂಗಳೂರು ಪೇಟೆ ದ.ಕ.ಜಿಪಂ ಹಿ.ಪ್ರಾ.ಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 24-ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್), ಯೂಸುಫ್ ಆಲಡ್ಕ (ಎಸ್‍ಡಿಪಿಐ), ಜಿ.ಜಿ. ಮುಹಮ್ಮದ್ (ಬಿಜೆಪಿ), ಮುಹಮ್ಮದ್ ಅಮಾನುಲ್ಲಾ (ಜೆಡಿಎಸ್) ಅಭ್ಯರ್ಥಿಗಳು. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 25-ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್), ಯಶೋಧ ಜಗನ್ನಾಥ (ಬಿಜೆಪಿ), ಬಿ.ಎಸ್. ಖೈರುನ್ನೀಸ (ಜೆಡಿಎಸ್) ಅಭ್ಯರ್ಥಿಗಳು. ಬೋಳಂಗಡಿ ಹಿ.ಪ್ರಾ.ಶಾಲೆಯಲ್ಲಿ ಮತಗಟ್ಟೆ.

ವಾರ್ಡ್ 26-ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್), ಉಷಾಲತಾ ಉಮೇಶ (ಬಿಜೆಪಿ) ಅಭ್ಯರ್ಥಿಗಳು. ಬೋಳಂಗಡಿ ಶಾಲೆಯಲ್ಲಿ ಮತಗಟ್ಟೆ

ವಾರ್ಡ್ 27-ಬೊಂಡಾಲ: ಸುರೇಶ್ ನಾಯ್ಕ (ಕಾಂಗ್ರೆಸ್), ಜಯರಾಮ ನಾಯ್ಕ (ಬಿಜೆಪಿ) ಅಭ್ಯರ್ಥಿಗಳು. ಈ ವಾರ್ಡಿಗೆ ಬೊಂಡಾಲ ಹಿ.ಪ್ರಾ.ಶಾಲೆಯಲ್ಲಿ ಎರಡು ಮತಗಟ್ಟೆಗಳಿವೆ.

ಪುತ್ತೂರು ನಗರಸಭಾ ಚುನಾವಣೆ: 31 ವಾರ್ಡ್‍ಗಳಿಗೆ 41 ಮತಗಟ್ಟೆ

ಪುತ್ತೂರು ನಗರಸಭೆ : ಪುತ್ತೂರು ನಗರಸಭೆಯಲ್ಲಿ ಒಟ್ಟು 77 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಬಿಜೆಪಿಯಿಂದ 31, ಕಾಂಗ್ರೆಸ್‍ನಿಂದ 31, ಜೆಡಿಎಸ್‍ನಿಂದ 9, ಎಸ್‍ಡಿಪಿಐನಿಂದ 3, ಬಿಎಸ್‍ಪಿಯಿಂದ 1, ಪಕ್ಷೇತರರು ಇಬ್ಬರು ಅಂತಿಮ ಸ್ಪರ್ಧಾ ಕಣದಲ್ಲಿದ್ದರು. 20,149 ಮಹಿಳೆಯರು ಹಾಗೂ 19596 ಪುರುಷರು ಸೇರಿದಂತೆ ಒಟ್ಟು 39,745 ಮತದಾರರು ಮತಚಲಾವಣೆಯ ಅವಕಾಶವನ್ನು ಹೊಂದಿದ್ದರು.

ಪಾರದರ್ಶಕ ಹಾಗೂ ಶಾಂತಿಯುತ ಮತದಾನದ ನಿಟ್ಟಿನಲ್ಲಿ 27 ಸೂಕ್ಷ್ಮ ಮತಗಟ್ಟೆಗಳನ್ನು ಹಾಗೂ 14 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸುದಾನ ವಸತಿ ಶಾಲೆಯ (2 ಮತಗಟ್ಟೆ), ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಬನ್ನೂರು ಸ.ಹಿ.ಪ್ರಾ. ಶಾಲೆ (4), ಚಿಕ್ಕಮುಡ್ನೂರು ಕೃಷ್ಣನಗರ ಸ. ಹಿ.ಪ್ರಾ. ಶಾಲೆಯಲ್ಲಿ (3), ಜಿಡೆಕಲ್ಲು ಸ.ಹಿ.ಪ್ರಾ. ಶಾಲೆ, ಸಾಲ್ಮರ ಶಾಲೆ, ಹಾರಾಡಿ ಸ. ಹಿ.ಪ್ರಾ. ಶಾಲೆ (3), ಬೊಳುವಾರು ಸ. ಹಿ.ಪ್ರಾ. ಶಾಲೆ, ರಾಗಿಕುಮೇರು ಸ. ಹಿ.ಪ್ರಾ. ಶಾಲೆ (2), ಪೆರಿಯತ್ತೋಡಿ ಅಂಗನವಾಡಿ ಕೇಂದ್ರ, ಪರ್ಲಡ್ಕ ಸ.ಹಿ.ಪ್ರಾ. ಶಾಲೆ (2), ಸಂತ ಫಿಲೋಮಿನಾ ಶಾಲೆ (2), ಮರೀಲು ಅಂಗನವಾಡಿ ಕೇಂದ್ರ, ಸಂಜಯನಗರ ಸ.ಹಿ.ಪ್ರಾ. ಶಾಲೆ (2), ಮೊಟ್ಟೆತ್ತಡ್ಕ ಕೆಮ್ಮಿಂಜೆ ಶಾಲೆಯ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿತ್ತು.

ನಗರಸಭಾ ಚುನಾವಣಾ ವ್ಯಾಪ್ತಿಯಲ್ಲಿ ಆ.31 ರಂದು ರಜೆ ಘೋಷಣೆಯಾಗಿದ್ದು, ಈ ವ್ಯಾಪ್ತಿಯ ಶಾಲಾ -ಕಾಲೇಜುಗಳು, ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಪುತ್ತೂರು ನಗರಸಭಾ ಚುನಾವಣೆಯಲ್ಲಿ ಮತದಾರರ ಬಲಗೈ ಹೆಬ್ಬೆರಳಿಗೆ ಅಳಸಲಾಗದ ಶಾಯಿ ಗುರುತನ್ನು ಹಚ್ಚಲಾಗುತ್ತದೆ. ಪ್ರಥಮ ಬಾರಿಗೆ ಇವಿಎಂ ಮತಯಂತ್ರ ಬಳಕೆ, ನೋಟಾ ಅವಕಾಶವನ್ನು ನೀಡಲಾಗಿದೆ.

ಸೆ. 3 ರಂದು ಮತ ಎಣಿಕೆ :

ಆ.31 ರಂದು ಸಂಜೆ ಡಿ ಮಸ್ಟರಿಂಗ್ ನಡೆಯಲಿದ್ದು, ಸೆ. 3 ರಂದು ಮತ ಎಣಿಕೆಯು ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಲಿದೆ.

Comments are closed.