ಕರಾವಳಿ

ಮಂಗಳೂರಿನಲ್ಲಿ ತುಳು ಎಂ.ಎ ತರಗತಿ ಶುಭಾರಂಭ

Pinterest LinkedIn Tumblr

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತುಳು ಸ್ನಾತಕೋತ್ತರ ವಿಭಾಗ ಆರಂಭವಾಗಿದ್ದು ವಿ.ವಿ ಸಂಧ್ಯಾ ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿದೆ.

ನಗರದ ವಿ.ವಿ ಸಂಧ್ಯಾ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳವಾರ ತುಳು ಎಂ.ಎ ತರಗತಿಗಳ ಅಧಿಕೃತ ಉದ್ಘಾಟನಾ ಸಮಾರಂಭ ಜರಗಿತು. ಕರ್ನಾಟಕ ಮುಕ್ತ ವಿ.ವಿ. ಮೈಸೂರು ಇಲ್ಲಿಯ ವಿಶ್ರಾಂತ ಉಪಕುಲಪತಿ ಪ್ರೊ. ಬಿ.ಎ. ವಿವೇಕ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಂಗಳೂರು ವಿ.ವಿ. ಯ ಉಪಕುಲಪತಿ ಪ್ರೊ. ಕಿಶೋರ್ ಕುಮಾರ್. ಸಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಳು ಪಠ್ಯ ವಿನಿಯಮ ರಚನಾ ಸಮಿತಿಯ ಅಧ್ಯಕ್ಷ ಡಾ. ನಾಗಪ್ಪ ಗೌಡ ಆರ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.