ಮನೋರಂಜನೆ

‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಹಾಟ್​​​ ಲುಕ್​ನಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಮೇಘನಾ ರಾಜ್!

Pinterest LinkedIn Tumblr


ನಮ್ಮ ಕನ್ನಡ ಸಿನಿ ರಂಗದಲ್ಲಿ ಇನ್ನೂ ಮಡಿವಂತಿಕೆ ಹಾಗೆಯೇ ಇದೆ. ಬಾಲಿವುಡ್-ಟಾಲಿವುಡ್ ನಟಿಯರು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡರೆ ನೋಡಿ ಎಂಜಾಯ್ ಮಾಡೋ ಪ್ರೇಕ್ಷಕರು, ಕನ್ನಡದ ನಟಿಯರು ಒಂಚೂರು ಧಾರಾಳತನ ತೋರಿದರೂ ಸಾಕು ಪ್ರಸಂಶೆ ಮಾಡೋದರಲ್ಲಿ ಜುಗ್ಗತನ ತೋರುತ್ತಾರೆ.

ನಟಿ ಮೇಘನಾ ರಾಜ್ ‘ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಒಂಚೂರು ಹೆಚ್ಚೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟಿಯಾಗಿ ಇದು ಬೇಕಿತ್ತಾ ಅನ್ನೋ ಕೊಂಕು ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಟಿ ಮೇಘನಾ ರಾಜ್ ಅವರೇ ಪ್ರತಿಕ್ರಿಯಿಸಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ ಓದಿ.

ಇದು ‘ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡು. ಈ ಹಾಡಿನಲ್ಲಿ ನಟಿ ಮೇಘನಾರಾಜ್ ಕೊಂಚ ಧಾರಾಳತನ ತೋರಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಹಾಡನ್ನ ನೋಡಿರೋ ಕೆಲವರು ಮೂಗು ಮುರಿತಾ ಇದ್ದಾರೆ. ಕನ್ನಡದ ನಟಿಯಾಗಿ ಇಷ್ಟೊಂದು ಬೋಲ್ಡ್‍ನೆಸ್ ಬೇಕಿತ್ತಾ ಅಂತಿದ್ದಾರೆ. ಈ ವೀಡಿಯೋ ಅಪ್ಲೋಡ್ ಆಗಿರೋ ಲಿಂಕ್ ಕ್ಲಿಕ್ ಮಾಡಿದರೆ ಸಾಕಷ್ಟು ಇಂತಹ ಕಮೆಂಟ್‍ಗಳು ನಮಗೆ ಕಾಣ ಸಿಗುತ್ತವೆ.

ಇನ್ನು ನಿನ್ನೆ `ಇರುವುದೆಲ್ಲವ ಬಿಟ್ಟು’ ಚಿತ್ರದ ಟ್ರೈಲರ್ ರಿಲೀಸಾಗಿದೆ. ತನ್ನ ಪಾತ್ರದ ಬಗ್ಗೆ ಹಾಗೂ ಚಿತ್ರದ ಬಗ್ಗೆ ಮಾತನಾಡುವ ವೇಳೆ ನಟಿ ಮೇಘನಾ ರಾಜ್ ತಮ್ಮ ಬೋಲ್ಡ್ ಲುಕ್ ಬಗ್ಗೆಯೂ ಮಾತನಾಡಿದ್ದಾರೆ.

ಇನ್ನು ಈ ಸಿನಿಮಾ ಸಬ್ಜೆಕ್ಟ್ ಚಿರುಗೆ ಸಖತ್ ಇಷ್ಟವಾಗಿದೆಯಂತೆ ಹೀಗಾಗಿ ಯಾವತ್ತೂ ಮೇಘನಾ ಅವರು ಅಭಿನಯಿಸುವ ಚಿತ್ರಗಳ ಸೆಟ್‍ಗೆ ಹೋಗದವರು ಈ ಚಿತ್ರದ ಶೂಟ್ ವೇಳೆ ಸೆಟ್‍ಗೂ ಎಂಟ್ರಿಕೊಟ್ಟಿದ್ದರಂತೆ. ಹಾಗೆ ಚಿತ್ರದ ಟ್ರೇಲರ್ ಅನ್ನು ಮೊದಲು ನೋಡಿದ್ದು ಚಿರು ಅವರೇ ಅಂತೆ. ಅಷ್ಟೇ ಅಲ್ಲದೆ ಧೃವಾ ಕೂಡ ಈ ಚಿತ್ರದ ಹಾಡುಗಳನ್ನ ಕೇಳಿ ಇಷ್ಟಪಟ್ಟಿದ್ದಾರಂತೆ. ಹೀಗೆಂದು ಹೇಳಿರುವುದು ಬೇರಾರು ಅಲ್ಲ ಅದು ಈ ಸಿನಿಮಾದ ನಾಯಕಿ ಮೇಘನಾ ರಾಜ್​.

ಅಂದಹಾಗೆ ಕಾಂತ ಕಣ್ಣಲ್ಲಿ ನಿರ್ದೇಶನದಲ್ಲಿ `ಇರುವುದೆಲ್ಲವ ಬಿಟ್ಟು’ ಚಿತ್ರದ ಮೂಲಕ ಈಗಿನವರ ತುಡಿತ ಮಿಡಿತವನ್ನ ಹೇಳಲಾಗಿದೆಯಂತೆ. ಇದೊಂದು ಇಂದಿನ ಪೀಳಿಗೆಯ ಸಿನಿಮಾ ಆಗಿದ್ದು, ಅವಿಭಕ್ತ-ವಿಭಕ್ತ ಕುಟುಂಬಗಳ ನಡುವಿನ ವ್ಯತ್ಯಾಸವನ್ನ, ದೃಶ್ಯರೂಪದಲ್ಲಿ ತೋರಿಸಲಾಗಿದೆಯಂತೆ.

ಶ್ರೀಧರ್ ವಿ ಸಂಭ್ರಮ್ ನಿರ್ದೇಶನದ `ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಟ್ರೇಲರ್ ಕೂಡ ಹೊಸ ಭರವಸೆ ಹುಟ್ಟಿಸಿದೆ. ಅಶೋಕ್ ದಾವಣಗೆರೆ ಎಂಬ ನವ ನಿರ್ಮಾಪಕ ಈ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದು, ಮೊದಲ ಯತ್ನದಲ್ಲೇ ಒಂದೊಳ್ಳೆ ಚಿತ್ರ ಕೊಡುವ ಸೂಚನೆಯನ್ನ ಟ್ರೇಲರ್​ನಲ್ಲೇ ನೀಡಿದ್ದಾರೆ.

ಒಟ್ಟಾರೆ ಮೇಘನಾರಾಜ್ ನಿರ್ವಹಿಸಿರೋ ಈವರೆಗಿನ ಪಾತ್ರಗಳಿಗಿಂತ ಈ ಚಿತ್ರದ ಪಾತ್ರ ಭಿನ್ನ ಅನಿಸೋ ಭಾವ ನೀಡುತ್ತಿದ್ದು, ಥಿಯೇಟರ್​ಗೆ ಬಂದ ಮೇಲೆ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಕಾದು ನೋಡಬೇಕು.

Comments are closed.