ಮನೋರಂಜನೆ

ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ

Pinterest LinkedIn Tumblr


ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ತನಗೆ ಮೋಸ ಮಾಡಿದ್ದಾರೆಂದು ಚೆನ್ನೈ ಮೂಲದ ಸ್ಟಾಕಿಸ್ಟ್ (ರೀಟೇಲರ್) ಮುರಳೀಧರನ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಹೃತಿಕ್ ಸೇರಿದಂತೆ 8 ಮಂದಿ ತನಗೆ 21 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ಕೋಡುಂಗೈಯೂರ್ ಪೊಲೀಸರಿಗೆ ಮುರಳಿಧರನ್ ದೂರು ನೀಡಿದ್ದಾರೆ.

ಎಚ್‌ಆರ್‌ಎಕ್ಸ್ ಬ್ರ್ಯಾಂಡ್‌ಗೆ ತನನ್ನು ಹೃತಿಕ್ ಸ್ಟಾಕಿಸ್ಟ್ ಆಗಿ ನೇಮಿಸಿದ್ದರು. ಬಳಿಕ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುರಳೀಧರನ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಹೃತಿಕ್ ಸೇರಿದಂತೆ ಉಳಿದ 8 ಮಂದಿ ಮೇಲೆ ಮಂಗಳವಾರ (ಆಗಸ್ಟ್ 28) ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹೃತಿಕ್ ಎಚ್‍ಆರ್‌ಎಕ್ಸ್ ಬ್ರ್ಯಾಂಡ್ ಆರಂಭಿಸಿದ್ದರು. ದೇಶದ ಹಲವು ನಗರಗಳಲ್ಲಿ ಇದಕ್ಕೆ ಸಂಬಂಧಿಸಿದ ಶಾಖೆಗಳನ್ನು ತೆರೆಯಲಾಗಿದೆ.

ಹೃತಿಕ್ ರೋಷನ್ ಸದ್ಯಕ್ಕೆ ವಿಕಾಸ್ ಬೆಹಲ್ ನಿರ್ದೇಶನದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಐಐಟಿ ಕನಸನ್ನು ಸಾಕಾರಗೊಳಿಸುತ್ತಿರುವ ಶಿಕ್ಷಕ ಆನಂದ್ ಕುಮಾರ್ (ಬಿಹಾರ್) ಜೀವನ ಕಥೆಯಾಧಾರಿತವಾಗಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಈ ಚಿತ್ರಕ್ಕೆ ‘ಸೂಪರ್ 30’ ಎಂದು ಹೆಸರಿಡಲಾಗಿದ್ದು ಆನಂದ್ ಕುಮಾರ್ ಪಾತ್ರವನ್ನು ಹೃತಿಕ್ ಪೋಷಿಸುತ್ತಿದ್ದಾರೆ. ‘ಸೂಪರ್ 30’ ಸಂಸ್ಥೆಗೆ ಸಂಬಂಧಿಸಿದಂತೆ ಅಸಂಬದ್ಧ ಅಂಶಗಳೊಂದಿಗೆ ಸಿನಿಮಾ ತೆರೆಗೆ ತರಲಾಗುತ್ತಿದೆ ಎಂದು ಆನಂದ್ ಕುಮಾರ್ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಸಹ ವಿವಾದಕ್ಕೆ ಸಿಕ್ಕಿದೆ.

Comments are closed.