ರಾಷ್ಟ್ರೀಯ

ಇರಾಕ್‌ ಧಾರ್ಮಿಕ ಗುರುವಿನಿಂದ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ನೀಡದಂತೆ ಫತ್ವಾ

Pinterest LinkedIn Tumblr


ಲಖನೌ: ಮುಸಲ್ಮಾನರಿಗೆ ಸೇರಿದ ವಕ್ಫ್ ಭೂಮಿಯಲ್ಲಿ ಮಂದಿರ ನಿರ್ಮಾಣ ಅಥವಾ ಇತರ ಧಾರ್ಮಿಕ ಕಟ್ಟಡಗಳಿಗೆ ಅವಕಾಶ ನೀಡಬಾರದು ಎಂದು ಶಿಯಾ ಸಮುದಾಯದ ಸರ್ವೋಚ್ಚ ಧಾರ್ಮಿಕ ಗುರು ಆಯಾತುಲ್ಲಾ ಅಲ್-ಸಿಸ್ತಾನಿ ಸೂಚಿಸಿದ್ದಾರೆ.

ಈ ಕುರಿತಂತೆ ಕಾನ್ಪುರದ ನಿವಾಸಿ ಎಮ್.ಎ ನಖ್ವಿ ಕಳುಹಿಸಿದ್ದ ಇ-ಮೇಲ್‌ಗೆ ಅವರು ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಕ್ಫ್‌ಗೆ ಸೇರಿದ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿರುವ ಉತ್ತರಪ್ರದೇಶ ಶಿಯಾ ವಕ್ಫ್‌‌ ಬೋರ್ಡ್‌ ಮುಖ್ಯಸ್ಥ ವಾಸೀಂ ರಿಜ್ವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮತ್ತು ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ನಖ್ವಿ ಒತ್ತಾಯಿಸುತ್ತಿದ್ದಾರೆ.

ವಕ್ಫ್ ಆಸ್ತಿ ಎಂದು ಹೇಳಲಾದ ವಿವಾದಿತ ಭೂಮಿಯನ್ನು ರಾಮ ಮಂದಿರಕ್ಕೆ ನೀಡಿ ಉತ್ತರಪ್ರದೇಶ ಶಿಯಾ ವಕ್ಫ್‌‌ ಬೋರ್ಡ್‌ ಮುಖ್ಯಸ್ಥ ವಾಸೀಂ ರಿಜ್ವಿ ನವೆಂಬರ್ 2017ರಲ್ಲಿ ಸುಪ್ರಿಂಕೋರ್ಟ್‌ ಮುಂದೆ ಪ್ರಸ್ತಾವನೆಯನ್ನಿಟ್ಟದ್ದರು. ಲಖನೌನಲ್ಲಿ ಮಸ್ಜಿದ್- ಇ- ಇಮಾನ್ ನಿರ್ಮಾಣ ಮಾಡಬೇಕೆಂಬುದು ಸಹ ಅವರ ಪ್ರಸ್ತಾವನೆಯಲ್ಲಿತ್ತು.

ಅವರ ಈ ಪ್ರಸ್ತಾವನೆಯನ್ನು ವಿರೋಧಿಸುವಂತೆ ಕೋರಿ ಇಸ್ಲಾಮಿಕ್ ವಿದ್ವಾಂಸ ಕಾನ್ಪುರ ಮಜರ್ ಅಬ್ಬಾಸ್ ನಖ್ವಿ ಸಿಸ್ತಾನಿಗೆ ಇ-ಮೇಲ್ ಕಳುಹಿಸಿದ್ದರು.

Comments are closed.