ಕರಾವಳಿ

ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಘೊಂಡ ಭೂಗತ ಪಾತಕಿ ಬನ್ನಂಜೆ ರಾಜಾ

Pinterest LinkedIn Tumblr

ಉಡುಪಿ: ಶನಿವಾರದಂದು ಮೃತರಾಗಿದ್ದ ತಾಯಿಯ ಅಂತಿಮ ಸಂಸ್ಕಾರಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಅಗಮಿಸಿದ್ದು ಉಡುಪಿಯ ಮಲ್ಪೆಯಲ್ಲಿನ ನಿವಾಸದಲ್ಲಿ ತಾಯಿಯ ಅಂತಿಮ ದರ್ಶನ ಪಡೆದು ತಾಯಿಯ ಮೃತ ದೇಹಕ್ಕೆ ಅಗ್ನಿಸ್ಪರ್ಶ ನೆರವೇರಿಸಿದ ಬಳಿಕ ಮತ್ತೆ ಕಾರಾಗೃಹಕ್ಕೆ ರಾಜಾನನ್ನು ಕರೆದೊಯ್ಯಲಾಯಿತು.

ಮನೆಯಲಳಿರುವ ವೇಳೆ ಕುಸಿದು ಬಿದ್ದು ಶನಿವಾರ ಮೃತರಾಗಿದ್ದ ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ (78) ಅಂತ್ಯಸಂಸ್ಕಾರವು ಮಲ್ಪೆಯ ಹಿಂದೂ ರುಧ್ರಭೂಮಿಯಲ್ಲಿ ನಡೆಯಿತು. ಇವರು ನಿವೃತ್ತ ಶಿಕ್ಷಕಿಯಾಗಿದ್ದರು.

ತಾಯಿ‌ ನಿಧನದ ಹಿನ್ನೆಲೆ ಕೋರ್ಟ್ ಅನುಮತಿ ಪಡೆದು ಅಂತ್ಯಸಂಸ್ಕಾರದಲ್ಲಿ ಉಡುಪಿ ಪೊಲೀಸರ ಬಿಗು ಬಂದೋಬಸ್ತಿನಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಬನ್ನಂಜೆ ರಾಜಾ ಸ್ವನಿವಾಸಕ್ಕೆ ಮುಖದಲ್ಲಿ ಬೇಸರವಿತ್ತು. ಮಾಧ್ಯಮಗಳ ಕ್ಯಾಮೆರಾಕ್ಕೆ ಕೈಮುಗಿಯುತ್ತಾ ಬಂದ ಬನ್ನಂಜೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಘೊಂಡಿದ್ದ. ಇತ್ತೀಚೆಗೆ ತಾಯಿಯ ಅನಾರೋಗ್ಯ ಹಿನ್ನಲೆ ಬನ್ನಂಜೆ ನ್ಯಾಯಾಲಯದ ಅನುಮತಿಯೊಂದಿಗೆ ಒಂದು ದಿನ (ಹಗಲು) ತಾಯಿಯೊಂದಿಗೆ ಕಳೆದಿದ್ದರು.

ಉಡುಪಿ‌ ಡಿವೈಎಸ್ಪಿ ಕುಮಾರಸ್ವಾಮಿ, ವಿವಿಧ ಠಾಣೆ ವೃತ್ತನಿರೀಕ್ಷಕರು, ಪಿಎಸ್ಐ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು.

Comments are closed.