ರಾಷ್ಟ್ರೀಯ

ಜಗತ್ತಿನಾದ್ಯಂತ ಇರುವ ಎಲ್ಲಾ ಮಲಯಾಳಿಗಳು ತಮ್ಮ 1 ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಿ:ಸಿಎಂ ಪಿಣರಾಯ್

Pinterest LinkedIn Tumblr

ತಿರುವನಂತಪುರ: ಜಗತ್ತಿನಾದ್ಯಂತ ಇರುವ ಎಲ್ಲಾ ಮಲಯಾಳಿಗಳು ತಮ್ಮ 1 ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆಗ್ರಹಿಸಿದ್ದಾರೆ.

ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪಿಣರಾಯ್ ವಿಜಯನ್, ಪ್ರಪಂಚಾದ್ಯಂತ ಇರುವ ಮಲಯಾಳಿಗಳು ಒಗ್ಗೂಡಬೇಕು, ಕೇರಳವನ್ನು ಪುನರ್ ನಿರ್ಮಿಸಲು ಹಣ ತೊಡಕಾಗಬಾರದು, ಹೀಗಾಗಿ ಕೇರಳ ರಾಜ್ಯವನ್ನು ಪುನರ್ ನಿರ್ಮಾಣ ಮಾಡಲು ಎಲ್ಲಾ ಮಲಯಾಳಿಗಳು ತಮ್ಮ ಒಂದು ತಿಂಗಳ ವೇತನವನ್ನು ನೀಡಬೇಕು ಎಂದು ಹೇಳಿದ್ದಾರೆ.

ಒಂದೇ ಬಾರಿಗೆ ಎಲ್ಲರೂ ತಮ್ಮ ಒಂದು ತಿಂಗಳ ವೇತನ ನೀಡಲು ಸಾಧ್ಯವಿಲ್ಲ, ನಿಮಗೆ ಹಣ ನೀಡಲು 10 ತಿಂಗಳ ಸಮಯ ಇರುತ್ತದೆ ಎಂದು ತಿಳಿಸಿದ್ದಾರೆ.

Comments are closed.