ಕರಾವಳಿ

ಉಪ್ಪುಂದದಲ್ಲಿ ಓಮ್ನಿ ಕಾರು ‘ಧಗ-ಧಗ’: ನಿಲ್ಲಿಸಿದ್ದ ವೇಳೆ ಹೊತ್ತಿಯುರಿದ ಓಮ್ನಿ (Video)

Pinterest LinkedIn Tumblr

ಕುಂದಾಪುರ: ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಸಂಪೂರ್ಣ ಕಾರು ಸುಟ್ಟು ಕರಕಲಾದ ಘಟನೆ ಬೈಂದೂರು ತಾಲೂಕಿನ ಕಂಚಿಕಾನ್ ರಸ್ತೆಯಲ್ಲಿ ನಡೆದಿದೆ.

ಬೆಂಕಿ ಕಾಣಿಸಿಕೊಳ್ಳಲು ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದು ಇನ್ನೂ ಕೆಲವರು ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಬೆಂಕಿ ನಂದಿಸುವಲ್ಲಿ ಸ್ಥಳೀಯರು ಮುಂದಾದರೂ ಕೂಡ ಬೆಂಕಿ ತೀವ್ರತೆಗೆ ಸಂಪೂರ್ಣ ಕಾರು ಹಾನಿಯಾಗಿದೆ. ಕಾರಿನ ಮಾಲೀಕನ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ.

ಬೈಂದೂರು ಪೊಲೀಸರು ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ.

Comments are closed.