ಕುಂದಾಪುರ: ಬೈಂದೂರು ತಾಲೂಕಿನ ಯಡ್ತರೆ ಪರಿಸರದ ರೆಸಾರ್ಟ್ ಒಂದರಲ್ಲಿ ಕಾರ್ಮಿಕಳಾಗಿದ್ದ ವಿಶೇಷ ಚೇತನ ಯುವತಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಅಪರಾಧಿಗೆ 10 ವರ್ಷ ಜೈಲು, ಹಾಗೂ 50 ಸಾವಿರ ದಂಡ ವಿಧಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ಪ್ರಕಾಶ ಖಂಡೇರಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ರೆಸಾರ್ಟಿನಲ್ಲಿ ವಾಹನ ಚಾಲಕನಾಗಿದ್ದ ಯೋಗೀಶ್ ಎಂಬವರು ವಿಕಲಚೇತನ ಯುವತಿ ನಂಬಿಸಿ ಅತ್ಯಾಚಾರ ನಡೆಸಿ, ನಂತರ ಪರಾರಿಯಾಗಿದ್ದ. ಸಂತ್ರಸ್ತೆಯ ತಂದೆ ದೂರು ನೀಡಿದ್ದು ತನಿಖೆ ನಡೆಸಿದ ಅಂದಿನ ಬೈಂದೂರು ಸಿಪಿಐ ಸುದರ್ಶನ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸಂತ್ರಸ್ತೆ ಸಹಿತ 13 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆದಿದ್ದು ಯೋಗೀಶ್ ವಿರುದ್ಧ ಹೊರಿಸಲಾದ ಆರೋಪ ಸಾಭೀತಾದ ಹಿನ್ನೆಲೆ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಮದುವೆ ಆಗುವುದಾಗಿ ನಂಬಿಸಿದ್ದಕ್ಕೆ ಒಂದು ವರ್ಷ ಸೇರಿ ಹತ್ತು ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿದ್ದು, ದಂಡ ಕೊಡಲು ತಪ್ಪಿದರೆ ಮತ್ತೊಂದು ವರ್ಷ ಶಿಕ್ಷೆ ಅನುಭವಿಸಬೇಕು.
ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ.
Comments are closed.