ರಾಷ್ಟ್ರೀಯ

ದಿಲ್ಲಿ ಹೊಟೇಲಿಂದ ಗಲ್ಫ್ ಗೆ ಸಾಗಾಟ ಮಾಡುತ್ತಿದ್ದ 39 ನೇಪಾಲಿ ಹುಡುಗಿಯರ ರಕ್ಷಣೆ

Pinterest LinkedIn Tumblr


ಹೊಸದಿಲ್ಲಿ : ದಿಲ್ಲಿ ಪೊಲೀಸ್‌ ಮತ್ತು ಮಹಿಳಾ ಆಯೋಗದ ಜಂಟಿ ತಂಡದವರು ಇಂದು ನಸುಕಿನ ವೇಳೆ ಪಹಾಡ್‌ಗಂಜ್‌ ಹೊಟೇಲ್‌ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ತಳ್ಳಲ್ಪಡಲಿದ್ದ ಕನಿಷ್ಠ 39 ನೇಪಾಲಿ ಹುಡುಗಿಯರನ್ನು ರಕ್ಷಿಸುವುದರೊಂದಿಗೆ ಬೃಹತ್‌ ಮಾನವ ಕಳ್ಳಸಾಗಣೆ ಜಾಲವನ್ನು ಬಯಲುಗೊಳಿಸಿದರು.

ಡಿಸಿಡಬ್ಲ್ಯು ಹೇಳಿಕೆ ಪ್ರಕಾರ ಮಾನವ ಕಳ್ಳಸಾಗಣೆ ವಿರುದ್ಧದ ಈ ಜಂಟಿ ಕಾರ್ಯಾಚರಣೆಯು ಇಂದು ನಸುಕಿನ 1 ಗಂಟೆಯಿಂದ ತೊಡಗಿ 6 ಗಂಟೆಯ ವರೆಗೆ ನಡೆಯಿತು.

ಪಹಾಡ್‌ಗಂಜ್‌ನ ಹೊಟೇಲ್‌ ಹೃದಯ್‌ ಇನ್‌ ಮೇಲೆ ನಡೆಸಲಾದ ದಾಳಿಯಲ್ಲಿ ಪಾರಾದ 39 ನೇಪಾಲಿ ಹುಡುಗಿಯರು ಕೊಲ್ಲಿ ದೇಶಕ್ಕೆ ಸಾಗಲ್ಪಡುವವರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.