ರಾಷ್ಟ್ರೀಯ

ಆಳ್ವಾರ್ ಸಾಮೂಹಿಕ ಹಲ್ಲೆ-ಸಾವು ಪ್ರಕರಣ: ಕರ್ತವ್ಯಲೋಪ ಆರೋಪದ ಮೇರೆಗೆ ಪೊಲೀಸ್ ಅಧಿಕಾರಿ ಅಮಾನತು-ಪೇದೆಗಳ ವರ್ಗಾವಣೆ

Pinterest LinkedIn Tumblr

ಜೈಪುರ: ರಾಜಸ್ಥಾನದ ಆಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪ ಎದುರಿಸುತ್ತಿರುವ ಪೊಲೀಸರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.

ಪ್ರಕರಣ ಸಂಬಂಧ ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದ್ದು, ಇತರೆ ಪೊಲೀಸ್ ಪೇದೆಗಳನ್ನು ಅಲ್ಲಿನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಕೆಲ ಮಾಧ್ಯಮಗಳು ಹಾಗೂ ಕೆಲ ಪತ್ರಿಕೆಗಳು ಸಾಮೂಹಿಕ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ಥನನ್ನು ಆಸ್ಪತ್ರೆಗೆ ಸೇರಿಸುವಾಗ ಪೊಲೀಸರು ಕರ್ತ್ಯವ್ಯಲೋಪ ಎಸಗಿದ್ದರು. ಮಾರ್ಗಮಧ್ಯೆ ಚಹಾ ಕುಡಿಯಲು ವಾಹನ ನಿಲ್ಲಿಸಿ ಸಂತ್ರಸ್ಥನ ಸಾವಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದವು.

ಈ ಸಂಬಂಧ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗಳಾಗುತ್ತಿದ್ದು, ಆಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳಲು ರಾಜಸ್ಥಾನ ಸರ್ಕಾರ ಪೊಲೀಸರ ಮೇಲೆ ಕ್ರಮ ಕೈಗೊಂಡಿದೆ.

ಮಾಧ್ಯಮಗಳ ವರದಿಯನ್ವಯ ಗೋಸಂರಕ್ಷಕರ ಸೋಗಿನಲ್ಲಿ ದಾಳಿ ಮಾಡಿದ್ದವಂರಿಂದ ಗಂಭೀರವಾಗಿ ಗಾಯಗೊಂಡಿದ್ದ ರಕ್ಬರ್ ಖಾನ್ ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬ ಮಾಡಿದ್ದರಿಂದಲೇ ಆತ ಸಾವನ್ನಪ್ಪಿದ್ದ ಎಂದು ಹೇಳಿದ್ದವು. ಘಟನಾ ಪ್ರದೇಶದಿಂದ ಆಸ್ಪತ್ರೆಗೆ ಕೇವಲ 6 ಕಿ.ಮೀ ಅಂತರವಿದ್ದು. ವಾಹನದಲ್ಲಿ ತೆರಳಿದರೆ ಕೇವಲ 15 ನಿಮಿದಲ್ಲಿ ಆಸ್ಪತ್ರೆ ಸೇರಬಹುದು. ಆದರೆ ಪೊಲೀಸರು 3 ಗಂಟೆ ತೆಗೆದುಕೊಂಡರು. ಸಾವುನೋವಿನ ನಡುವೆ ಸಂತ್ರಸ್ಥ ನರಳುತ್ತಿದ್ದರೂ ಪೊಲೀಸರು ಮಾರ್ಗ ಮಧ್ಯೆ ಚಹಾ ಸೇವಿಸಲು ವಾಹನ ನಿಲುಗಡೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

Comments are closed.