ರಾಷ್ಟ್ರೀಯ

‘ಹಿಂದೂ ಪಾಕಿಸ್ತಾನ’ದ ಹೇಳಿಕೆ ವಿವಾದ; ಕಾಂಗ್ರೆಸ್ ಸಂಸದ ಶಶಿ ತರೂರ್‌ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು

Pinterest LinkedIn Tumblr

ತಿರುವನಂತಪುರಂ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ತಿರುವನಂತಪುರ ಕಚೇರಿಯನ್ನು ಸೋಮವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಒಂದೊಮ್ಮೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುವ ಮೂಲಕ ‘ಹಿಂದೂ ಪಾಕಿಸ್ತಾನ’ದ ಸೃಷ್ಟಿಗೆ ಕಾರಣವಾಗಲಿದೆ ಎಂಬ ಅವರ ಹೇಳಿಕೆ ವಿವಾದಕ್ಕೆ ತಿರುಗಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಸಂಘಿ ಗೂಂಡಾಗಳ ಕೃತ್ಯ: ಬಿಜೆಪಿ ಮತ್ತು ಸಂಘಿ ಗೂಂಡಾಗಳು ತಿರುವನಂತಪುರದಲ್ಲಿರುವ ನನ್ನ ಕಚೇರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎಂದು ಸ್ವತಃ ತರೂರ್‌ ಅವರೇ ಟ್ವೀಟ್‌ ಮಾಡಿದ್ದಾರೆ. ನಾಮಫಲಕ, ಗೋಡೆಗಳು, ಬಾಗಿಲು, ದ್ವಾರಗಳಿಗೆ ಕಪ್ಪು ಇಂಜಿನ್‌ ಆಯಿಲ್‌ ಚೆಲ್ಲಿದ ಆರೋಪಿಗಳು ಅಹವಾಲು ಸಲ್ಲಿಸಲು ಬಂದಿದ್ದ ಅಮಾಯಕ ಜನರನ್ನು ಓಡಿಸಿದ್ದಾರೆ. ಮಾನಹಾನಿಕರ ಬ್ಯಾನರ್‌ಗಳನ್ನು ಹಾಕಿದ್ದಾರೆ. ಮತ್ತು ನನ್ನನ್ನು ಪಾಕಿಸ್ತಾನಕ್ಕೆ ಹೊಗುವಂತೆ ಘೋಷಣೆ ಕೂಗಿದ್ದಾರೆ ಎಂದು ತರೂರ್‌ ಹೇಳಿದ್ದಾರೆ.

ನಮಗೆಲ್ಲ ಎಚ್ಚರಿಕೆಯನ್ನು ನೀಡಲಾಗಿದೆ. ನೀವು ಹಿಂದೂ ರಾಷ್ಟ್ರದ ಕನಸನ್ನು ಕೈಬಿಟ್ಟಿದ್ದೀರಾ ಎಂಬ ಸರಳ ಪ್ರಶ್ನೆಗೆ ಅವರ ಉತ್ತರ ಹಿಂಸೆ ಮತ್ತು ವಿಧ್ವಂಸಕ ಕೃತ್ಯ ಎನ್ನುವುದು ನಿಚ್ಚಳವಾಗಿದೆ. ಇಲ್ಲಿ ಅನಾವರಣಗೊಂಡದ್ದು ಅದೇ ಮುಖ. ಸಂಘಿ ಗೂಂಡಾಗಳು ನಮ್ಮ ಪ್ರತಿನಿಧಿಗಳಲ್ಲ ಎಂದು ಹೆಚ್ಚಿನ ಹಿಂದೂಗಳು ಹೇಳಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ತರೂರ್‌.

Comments are closed.