
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಿಡಿದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವವರಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ಶಾಕ್ ನೀಡಿದೆ.
ಹೌದು! ನಕಲಿ ಫಾಲೋವರ್ಸ್ ಹಾಗು ನಕಲಿ ಸುದ್ಧಿ ಹರಡುವ ಖಾತೆಗಳ ವಿರುದ್ಧ ಟ್ವಿಟರ್ ಹೋರಾಟ ನಡೆಸುತ್ತಿದ್ದ, ಪರಿಣಾಮ ಕೇವಲ ಒಂದೇ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ 272,000 ಫಾಲೋವರ್ಸ್ ಕಳೆದುಕೊಂಡಿದ್ದಾರೆ. ಇವರಿಗಿಂತ ಒಂದು ಮುಂದೆ ಹೋಗಿರುವ ಅಮೆರಿಕ ಅಧ್ಯಕ್ಷ 100,000 ಫಾಲೋವರ್ಸ್ಗಳ ಸಂಖ್ಯೆ ಇಳಿಮುಖವಾಗಿದೆ.
ಕಳೆದ ವರ್ಷ ಅಮೆರಿಕ ಚುನಾವಣೆ ಸಂದರ್ಭದಲ್ಲಿ ಹಲವಾರು ಫೇಸ್ಬುಕ್ ಹಾಗೂ ಟ್ವಿಟರ್ ನಕಲಿ ಖಾತೆಗಳನ್ನು ಬಳಸಲಾಗಿತ್ತು, ಇದಕ್ಕೂ ಕೇಂಬ್ರಿಡ್ಜ್ ಅನಾಲೆಟಿಕಾದೊಂದಿಗೆ ಫೇಸ್ಬುಕ್ ಸಂಪರ್ಕ ಹೊಂದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಹೀಗಾಗಿ ಇಂತಹ ನಕಲಿ ಖಾತೆಗಳ ವಿರುದ್ಧ ಸಮರ ಸಾರಿರುವ ಫೇಸ್ಬುಕ್ ಹಾಗೂ ಟ್ವಿಟರ್ ಸಂಸ್ಥೆಗಳು ತಮ್ಮಲ್ಲಿರುವ ನಕಲಿ ಖಾತೆಗಳನ್ನು ಸ್ಥಗಿತಗೊಳಸಲು ತೀರ್ಮಾನಿಸಿದ್ದಾರೆ.
ಇದರ ಮತ್ತೊಂದು ಹೆಜ್ಜೆಯಾಗಿ ಟ್ವಿಟರ್ ಕೆಲದಿನಗಳ ಹಿಂದೆ ಸುಮಾರು 70 ಮಿಲಿಯನ್ ನಕಲಿ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸುರುವಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು. ಇದರ ಮುಂದಿನ ಹಂತವಾಗಿ ಹಲವಾರು ಫೇಮನಸ್ ಸೆಲೆಬ್ರೆಟಿಗಳ ಫಾಲೋವರ್ಸ್ಗಳ ಸಂಖ್ಯೆಯಲ್ಲಿ ಇಳಿತ ಕಾಣಿಸತೊಡಗಿದೆ.
ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯಲ್ಲಿ ಒಟ್ಟಾ 100,000 ಫಾಲೋವರ್ಸ್ಗಳ ಸಂಖ್ಯೆ ಇಳಿಮುಖವಾಗಿದೆ. ಬೆಂಬಲವೆಂಬಂತೆ ಅಮೆರಿಕದ ಮಾಜಿ ಪ್ರಧಾನಿ ಬರಾಕ್ ಒಬಾಮ ಅವರ ಖಾತೆಯಲ್ಲಿದ್ದ 400,000 ಮಂದಿ ಫಾಲೋವರ್ಸ್ಗಳು ಕಾಣೆಯಾಗಿದ್ದಾರಂತೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಸೆಲೆಬ್ರೆಟಿ ಮಾತ್ರವಲ್ಲ ಶೇ.90ರಷ್ಟು ಟ್ವಿಟರ್ ಬಳಕೇದಾರ ಖಾತೆಯಲ್ಲಿನ ಫಾಲೋವರ್ಸ್ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಿದೆ.
ಟ್ವಿಟರ್ನಲ್ಲಿ ಬರುತ್ತಿದ್ದಂತಹ ನಕಲಿ ಸುದ್ದಿ, ಮಾನಸಿಕ ಹಿಂಸೆ, ತೇಜೋವದೆ, ಖಾಸಾಗಿ ಮಾಹಿತಿ ರವಾನೆ, ಆನ್ಲೈನ್ ಕಿರುಕುಳದಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.
Comments are closed.