
ಬೆಂಗಳೂರು: ರೌಡಿಶೀಟರ್ ಸೈಕಲ್ ರವಿ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗವಾಗಿದೆ.
ಸ್ಯಾಂಡಲ್‌ವುಡ್ ನಿರ್ಮಾಪಕರು, ಕಲಾವಿದರ ಜತೆ ರೌಡಿಶೀಟರ್ ನಂಟು ಹೊಂದಿದ್ದು, ಪ್ರಭಾವಿ ರಾಜಕಾರಣಿಗಳು ಸೇರಿ ಹಲವರಿಂದ ಕರೆ ಬಂದಿದೆ ಎಂದು ಸಿಸಿಬಿ ತನಿಖೆ ವೇಳೆ ತಿಳಿದುಬಂದಿದೆ.
ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ 10 ಕ್ಕೂ ಹೆಚ್ಚು ಮೊಬೈಲ್ಗಳನ್ನು ಬಳಸುತ್ತಿದ್ದ ಸೈಕಲ್ ರವಿ ಮೊಬೈಲ್ ಮೂಲಕವೇ ಡೀಲಿಂಗ್ ನಡೆಸುತ್ತಿದ್ದ ಎನ್ನಲಾಗಿದೆ.
ಸುಮಾರು 250 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು, ಕೋಟ್ಯಂತರ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಜೂನ್ 27ರಂದು ರೌಡಿಶೀಟರ್ ರವಿ ಮೇಲೆ ಸಿಸಿಬಿ ಪೊಲೀಸರು ರಾಜರಾಜೇಶ್ವರಿನಗರ ಬಳಿಯ ನೈಸ್‌ರೋಡ್ ಬಳಿ ಶೂಟೌಟ್ ಮಾಡಿದ್ದರು. ಶೂಟೌಟ್‌ನಲ್ಲಿ ಸೈಕಲ್ ರವಿ ಕಾಲು, ಹೊಟ್ಟೆಗೆ ಗುಂಡೇಟು ತಗುಲಿತ್ತು. ಬಂಧನದ ಬಳಿಕ ಸೈಕಲ್ ರವಿಗೆ ಸೇರಿದ ಟೊಯೋಟಾ ಪಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.
ಸದ್ಯ ರವಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
Comments are closed.