
ಬೆಂಗಳೂರು: ಡಿಕೆ ಶಿವಕುಮಾರ್ಗೆ ಮತ್ತಷ್ಟು ಸಂಕಟ ಎದುರಾಗಿದೆ. ಡಿಕೆಶಿಯ ಅಘೋಷಿತ ನಗದು ವ್ಯವಹಾರ ನೋಡಿಕೊಳ್ಳುತ್ತಿದ್ದ A-4 ಆಂಜನೇಯ ನೀಡಿದ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತನ್ನ ಮನೆಯಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಸಿಕ್ಕಿದ್ದ ಸುಮಾರು 12.44 ಲಕ್ಷ ರೂಪಾಯಿ ತನ್ನದಲ್ಲ. ಅದು ಡಿಕೆಶಿಗೆ ಸೇರಿದ್ದು ಎಂದು ಕರ್ನಾಟಕ ಭವನದ ಸಂಪರ್ಕಾಧಿಕಾರಿ ಆಂಜನೇಯ ಐಟಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮತ್ತೊಮ್ಮೆ ಐಟಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾಗಬೇಕಾದ ಸಾಧ್ಯತೆಗಳೂ ಇವೆ. ನಿನ್ನೆಯಷ್ಟೇ ಐಟಿ ಅಧಿಕಾರಿಗಳು ನ್ಯಾಯಾಲಯದಲ್ಲಿ ದೂರೊಂದನ್ನು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ ಆಗಸ್ಟ್ನಲ್ಲಿ ಬರುವಂತೆ ಸೂಚಿಸಿತ್ತು.
ಡಿಕೆಶಿ ಮೇಲೆ ನಡೆದ ಐಟಿ ದಾಳಿಯ ಸಂದರ್ಭದಲ್ಲಿ ದೆಹಲಿಯಲ್ಲೂ ದಾಳಿ ನಡೆಸಲಾಗಿತ್ತು. ಇದೇ ವಿಚಾರವಾಗಿ ಸಲ್ಲಿಸಿದ ದೂರಿನ ವಿಚಾರಣೆ ಇದಾಗಿದ್ದು, ರಾಜೇಂದ್ರ, ಸುನಿಲ್ ಶರ್ಮಾ, ಆಂಜನೇಯ ಮುಂತಾದವರೆಲ್ಲರೂ ವಿಭಿನ್ನ ಹೇಳಿಕೆಗಳನ್ನು ನೀಡಿದ್ದರು. ಆದರೀಗ 7 ತಿಂಗಳ ಬಳಿಕ ಐಟಿಗೆ ಪತ್ರ ಬರೆದಿರುವ ಆರೋಪಿಗಳು ಆತಂಕದಲ್ಲಿ ಹೇಳಿಕೆ ನೀಡಿದ್ದಾಗಿ ಉಲ್ಟಾ ಹೊಡೆದಿದ್ದಾರೆ. ಅಲ್ಲದೇ kg ಎಂದರೆ ಲಕ್ಷ ಎಂದು ಕೋಡ್ ವರ್ಡ್ ಎಂದಿದ್ದ A-5 ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
Comments are closed.