ರಾಷ್ಟ್ರೀಯ

ನಿಮ್ಮ ಕೈಲಾಗದಿದ್ದರೆ ಹೇಳಿ, ನನ್ನ ಸಹೋದರ ಕೊಂದ ಉಗ್ರರ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತೇನೆ : ಹುತಾತ್ಮ ಯೋಧನ ಸಹೋದರನ ಆಕ್ರೋಶ

Pinterest LinkedIn Tumblr

ಶ್ರೀನಗರ: ನಿಮ್ಮ ಕೈಲಾಗದಿದ್ದರೆ ಹೇಳಿ, ನನ್ನ ಸಹೋದರ ಕೊಂದ ಉಗ್ರರ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹುತಾತ್ಮ ಯೋಧ ಔರಂಗಜೇಬ್ ಸಹೋದರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಗ್ರರಿಂದ ಹತ್ಯೆಗೀಡಾದ ಯೋಧ ಔರಂಗಜೇಬ್ ನ ಅಂತ್ಯ ಸಂಸ್ಕಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಹೋದರ, ಕೇಂದ್ರ ಸರ್ಕಾರ ಉಗ್ರರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಈ ಪೈಕಿ ವಿಫಲವಾಗಿದ್ದು, ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೆ ಹೇಳಿ… ನಾವೇ ನನ್ನ ಸಹೋದರ ಸಾವಿನ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ನನ್ನ ಸಹೋದರ ಸಾವಿಗೆ ಕಾರಣರಾದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಓರ್ವ ಯೋಧನ ಸಾವಿಗೆ ಅಲ್ಲಿ ನೂರು ಉಗ್ರರು ಸಾಯಬೇಕು. ಒಂದು ವೇಳೆ ಇದು ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೆ ಹೇಳಿ, ನಾವು ಉಗ್ರರ ರುಂಡ ಚೆಂಡಾಡುತ್ತೇವೆ ಎಂದು ಸಹೋದರ ಹನೀಫ್ ಭಾವುಕರಾಗಿ ಹೇಳಿದ್ದಾರೆ.

ರಂಜಾನ್ ಹಬ್ಬದ ನಿಮಿತ್ತ ಮನೆಗೆ ಆಗಮಿಸಿದ್ದ ಯೋಧನನ್ನು ಉಗ್ರರು ಅಪಹರಿಸಿದ್ದರು. ಬಳಿಕ ಆತನ ಶವ ಪುಲ್ವಾಮದಲ್ಲಿ ಪತ್ತೆಯಾಗಿತ್ತು. ನಿನ್ನೆ ರಜೌರಿಯಲ್ಲಿ ಆತನ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಲಾಗಿತ್ತು.

Comments are closed.