ಕರ್ನಾಟಕ

ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ!

Pinterest LinkedIn Tumblr


ಬೆಂಗಳೂರು: ವಸತಿ ನಿಲಯದಲ್ಲಿದ್ದುಕೊಂಡು ಓದುತ್ತಿದ್ದ ಬಾಲಕಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸರ್ಜಾಪುರದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಮೃತಳನ್ನು ದೊಡ್ಡ ತಿಮ್ಮಸಂದ್ರದ ನಿವಾಸಿ ವೈಶಾಲಿ ಎಂದು ಗುರುತಿಸಲಾಗಿದ್ದು, ಆಕೆ 5 ನೇ ತರಗತಿಯಲ್ಲಿ ಓದುತ್ತಿದ್ದಳು.

ಮಲಗಿದ್ದ ಬೆಡ್ ಮೇಲೆ ಸಾವನ್ನಪ್ಪಿರುವ ವೈಶಾಲಿ ಸಾವು ಅನುಮಾನಾಸ್ಪದವಾಗಿದ್ದು ದೇಹದ ಮೇಲೆ ಗಾಯದ ಗುರುತುಗಳಿಲ್ಲ. ಜತೆಗೆ ಕೊಠಡಿಯಲ್ಲಿ ಅಸಹಜ ಘಟನೆಗಳು ನಡೆದ ಕುರುಹುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ತಿಬೆಲೆ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಶಾಲೆ ಸರ್ಜಾಪುರದಲ್ಲಿ ನಡೆಸುತ್ತಿರುವ ಸಮುದಾಯ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಆಯ್ಕೆಯಾದ 10 ವಿದ್ಯಾರ್ಥಿಗಳಲ್ಲಿ

ವೈಶಾಲಿ ಕೂಡ ಒಬ್ಬಳಾಗಿದ್ದಳು.

ವೈಶಾಲಿ ತಾಯಿ ಸುಗುಣ, ಮಡಿವಾಳದಲ್ಲಿ ಹೂ ವ್ಯಾಪಾರ ನಡೆಸುತ್ತಿದ್ದು, ಕೂಲಿ ಕೆಲಸ ಮಾಡುತ್ತಿದ್ದ ತಂದೆ ರಾಜೇಂದ್ರ 2009ರಲ್ಲಿಯೇ ಅವರಿಂದ ದೂರವಾಗಿದ್ದರು. ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದ ಸುಗುಣ ಮಗಳನ್ನು ಉಚಿತ ಶಿಕ್ಷಣ ಕೋಟಾದಡಿ ಸಮುದಾಯ ಶಾಲೆಗೆ ಸೇರಿಸಲು ಯಶಸ್ವಿಯಾಗಿದ್ದಳು. ಆದರೆ ಮಗಳೀಗ ಅಕಾಲಿಕ ಸಾವನ್ನಪ್ಪಿದ್ದಾಳೆ.

ಕೆಲವು ದಿನಗಳಿಂದ ವೈಶಾಲಿಗೆ ಅನಾರೋಗ್ಯ ಕಾಡುತ್ತಿದ್ದು, ಇದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದಳು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಬಾಲಕಿಯ ತುಟಿ ಮತ್ತು ಕುತ್ತಿಗೆಯಲ್ಲಿರುವ ಸರದ ಮೇಲೆ ರಕ್ತದ ಕಲೆಗಳಿದ್ದು ಆಕೆ ವಾಂತಿ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ಬಳಿಕ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Comments are closed.