ರಾಷ್ಟ್ರೀಯ

ಉತ್ತರ ಪ್ರದೇಶದ ವಾರಾಣಸಿಯ ಘಾಟ್‌ಗಳಲ್ಲಿ ಶವಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್ ಕಡ್ಡಾಯ

Pinterest LinkedIn Tumblr


ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಘಾಟ್‌ಗಳಲ್ಲಿ ಶವಸಂಸ್ಕಾರ ಮಾಡಬೇಕಾದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್‌ ನೀಡಬೇಕಾಗುತ್ತದೆ. ಮಣಿಕರ್ಣಿಕ ಮತ್ತು ರಾಜಾ ಹರಿಶ್ಚಂದ್ರ ಘಾಟ್‌ಗಳಲ್ಲಿ ಆಧಾರ್ ಕಾರ್ಡ್‌ ನಿಯಮ ಕಡ್ಡಾಯ ಮಾಡಿದ್ದು, ಆಧಾರ್ ಇಲ್ಲದಿದ್ದರೆ ಶವಸಂಸ್ಕಾರಕ್ಕೆ ಅನುಮತಿ ದೊರೆಯುವುದಿಲ್ಲ.

ಜತೆಗೆ ಶವಸಾಗಣೆಗೆ ಶವವಾಹಿನಿ ಮೋಟಾರ್ ಬೋಟ್‌ ಸೌಲಭ್ಯ ಪಡೆದುಕೊಳ್ಳಲು ಮೃತರ ಸಂಬಂಧಿಕರು ಗುರುತಿನ ಚೀಟಿ ತೋರಿಸುವುದು ಕೂಡ ಅವಶ್ಯವಾಗಿದೆ. ಆದರೆ ಮಹಾಸ್ಮಶಾನ್ ಘಾಟ್‌ನಲ್ಲಿ ಈ ನಿಯಮ ಜಾರಿಯಾಗಿಲ್ಲ.

ಎನ್‌ಡಿಆರ್‌ಆಫ್ ನೆರವಿನೊಂದಿಗೆ ಗುಜರಾತ್‌ನ ಸುಧಾಂಶು ಫೌಂಡೇಶನ್ ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ಕೊಲೆ, ವರದಕ್ಷಿಣೆ ಹತ್ಯೆಯಂತಹ ಸಾವಿನ ಪ್ರಕರಣಗಳ ಕುರಿತ ಮಾಹಿತಿ ಸಂಗ್ರಹಿಸಲು ಆಧಾರ್ ಮತ್ತು ಗುರುತು ಚೀಟಿ ಬಳಕೆ ನೆರವಾಗುತ್ತಿದೆ ಎಂದು ಫೌಂಡೇಶನ್ ಹೇಳಿದೆ.

Comments are closed.