ರಾಷ್ಟ್ರೀಯ

ದುಬೈಗೆ ಹೊರಟ ಪ್ರಯಾಣಿಕನಿಂದ 2.94 ಕೋಟಿ ವಿದೇಶಿ ಕರೆನ್ಸಿ ವಶ, ಬಂಧನ

Pinterest LinkedIn Tumblr


ಹೊಸದಿಲ್ಲಿ : 2.94 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ, ದುಬೈಗೆ ಹೊರಟ ವಿಮಾನ ಪ್ರಯಾಣಿಕನೋರ್ವನನ್ನು ಕಸ್ಟಮ್ಸ್‌ ಅಧಿಕಾರಿಗಳು ಇಂದು ಶುಕ್ರವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು.

ಆರೋಪಿ ಪ್ರಯಾಣಿಕನು ತನ್ನ ದುಬೈ ವಿಮಾನ ಪ್ರಯಾಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕೆಲಸದಲ್ಲಿ ನಿರತನಾಗಿದ್ದ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡರು.

ಆರೋಪಿ ಪ್ರಯಾಣಿಕನನ್ನು ಆತನ ಸಹಚರ ಟ್ರಾವೆಲ್‌ ಏಜಂಟ್‌ ಜತೆಗೆ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದರು.

Comments are closed.