
ಎಂಬಂಡಾಕಾ (ಡಿಆರ್ ಕಾಂಗೋ) : ವಾಯವ್ಯ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ದಲ್ಲಿನ ದುರ್ಗಮ ಪ್ರದೇಶದಲ್ಲಿರುವ ನದಿಯೊಂದರಲ್ಲಿ ಬೋಟ್ ಮುಳುಗಿ 50 ಮಂದಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.
ಈ ದುರ್ಘಟನೆ ಮಾಂಬೋಯೋ ನದಿಯಲ್ಲಿ ಮೊನ್ನೆ ಬುಧವಾರ ರಾತ್ರಿ ಸಂಭವಿಸಿತೆಂದು ಟಿಶುವಾಪಾ ಪ್ರಾಂತ್ಯದ ಉಪ ರಾಜ್ಯಪಾಲರಾಗಿರುವ ರಿಚರ್ಡ್ ಎಂಬೋಯೋ ಇಲುಕಾ ತಿಳಿಸಿದ್ದಾರೆ.
ನಿನ್ನೆ ಗುರುವಾರ 49 ಮೃತ ದೇಹಗಳು ಪತ್ತೆಯಾಗಿವೆ. ಒಬ್ಟಾತ ನಾಪತ್ತೆಯಾಗಿದ್ದಾನೆ ಎಂದು ಹೇಳಿರುವ ಇಲುಕಾ, ನತದೃಷ್ಟ ಬೋಟು ಪ್ರಯಾಣಿಕರನ್ನು ಮತ್ತು ಭಾರೀ ಪ್ರಮಾಣದ ಸರಕನ್ನು ಸಾಗಿಸುತ್ತಿತ್ತು ಎಂದು ಹೇಳಿದ್ದಾರೆ. ಬೋಟು ಮುಳುಗಲು ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ.
Comments are closed.