
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಸಾಲಿನ ಟಿ 20 ಪಂದ್ಯಾವಳಿ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 5 ವಿಕೆಟ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ದಿನೇಶ್ ಕಾರ್ತಿಕ್ ಬಳಗ ‘ಪ್ಲೇ ಆಫ್’ ಪ್ರವೇಶಿಸಿದೆ.
ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 20 ಓವರ್ ಗಳಲ್ಲಿ 9 ವಿಕೆಟ್ಗೆ 172 ರನ್ ಗಳಿಸಿತು.ಸವಾಲಿನ ಗುರಿಯನ್ನು ಕೆಕೆಆರ್ 19.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಮುಟ್ಟಿತು.
ಶಿಖರ್ ಧವನ್ (50; 39ಎ, 5ಬೌಂ, 1ಸಿ) ಮತ್ತು ಶ್ರೀವತ್ಸ ಗೋಸ್ವಾಮಿ (35; 26ಎ, 4ಬೌಂ, 1ಸಿ) ಅವರು ಸನ್ರೈಸರ್ಸ್ಗೆ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಸೇರಿ ಮೊದಲ ವಿಕೆಟ್ಗೆ 70 ರನ್ ಗಳಿಸಿದರು. ಒಂಬತ್ತನೇ ಓವರ್ನಲ್ಲಿ ಗೋಸ್ವಾಮಿ ಅವರು ಕುಲದೀಪ್ ಯಾದವ್ ಬೌಲಿಂಗ್ನಲ್ಲಿ ಔಟಾದರು. ನಂತರ ಕ್ರೀಸ್ ಗೆ ಬಂದ ನಾಯಕ ಕೇನ್ ವಿಲಿಯಮ್ಸನ್ (36;17ಎ, 1ಬೌಂ, 3ಸಿ) ಶಿಖರ್ ಧವನ್ ಜೊತೆಗೂಡಿ ಎರಡನೇ ವಿಕೆಟ್ಗೆ 48 ರನ್ ಸೇರಿಸಿದರು.
ಪ್ರಸಿದ್ಧ ಕೃಷ್ಣ ಮಿಂಚು: ಬೃಹತ್ ಮೊತ್ತ ಗಳಿಸುವತ್ತ ಮುನ್ನಡೆದಿದ್ದ ಆತಿಥೇಯ ತಂಡಕ್ಕೆ ಕನ್ನಡದ ಹುಡುಗ ಪ್ರಸಿದ್ಧ ಕೃಷ್ಣ (30ಕ್ಕೆ4) ಅವರು ಅಡ್ಡಿಯಾದರು. ಮಧ್ಯಮವೇಗಿ ಪ್ರಸಿದ್ಧ, ಶಿಖರ್ ಧವನ್, ಮನೀಷ್ ಪಾಂಡೆ (25 ರನ್), ಶಕೀಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರ ವಿಕೆಟ್ಗಳನ್ನು ಕಬಳಿಸಿದರು.
ಕೋಲ್ಕತ್ತಾ ಪರವಾಗಿ ಪಿ. ಕೃಷ್ಣ 4 ವಿಕೆಟ್, ಗಳಿಇಸಿ ಮಿಂಚಿದರೆ ಆಂಡ್ರೆ ರಸೆಲ್, ಸುನಿಲ್ ನರೈನ್, ಜಾವೊನ್ ಸೀರ್ಲ್ಸ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಎದುರಾಳಿ ತಂಡ ಒಡ್ಡಿದ 173 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ದಿಟ್ಟ ಪ್ರದರ್ಶನ ನೀಡಿತ್ತು.
ಕೋಲ್ಕತ್ತಾ ತಂಡದ ಕ್ರಿಸ್ ಲಿನ್ 55 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವರ ಜತೆಯಾದ ಇನ್ನೋರ್ವ ಆಟಗಾರ ರಾಬಿನ್ ಉತ್ತಪ್ಪ ಸಹ 45 ರನ್ ಕಲೆ ಹಾಕಿದ್ದರು. ಇನ್ನು ಸುನೀಲ್ ನರೈನ್ ಹಾಗೂ ದಿನೇಶ್ ಕಾರ್ತಿಕ್ ಕ್ರಮವಾಗಿ 29 ಹಾಗೂ 26 ರನ್ ಗಳಿಸಿದ್ದರು.
ರಾಜಸ್ಥಾನದ ಪರವಾಗಿ ಸಿದ್ದಾರ್ಥ್ ಕೌಲ್ ಮತ್ತು ಕಾರ್ಲೋಸ್ ಬ್ರಾಥ್ವೈಟ್ 2, ವಿಕೆಟ್ ಕಬಳಿಸಿದರೆ ಶಕೀಬ್ ಅಲ್ ಹಸನ್ 1ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
Comments are closed.