
ಬೆಂಗಳೂರು: ಶನಿವಾರ ಬೆಳಿಗ್ಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಾಣಿಸಿಕೊಳ್ಳದ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ್ ಹಾಗು ಆನಂದ್ ಸಿಂಗ್ ಮಧ್ಯಾಹ್ನದ ವೇಳೆ ಈ ವಿಧಾನಸೌಧಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು.
ಗೋಲ್ಡ್‌ಫಿಂಚ್ ಹೋಟೆಲ್‌ನಿಂದ ಪ್ರತಾಪ್‌ಗೌಡ ಪೊಲೀಸ್ ಭದ್ರತೆಯಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್ ವಿಪ್ ನೀಡಿದರು.
ಪ್ರತಾಪ್‌ಗೌಡ ವಿಧಾನಸೌಧದಲ್ಲಿಯೇ ಮಧ್ಯಾಹ್ನದ ಭೋಜನ ಸೇವಿಸಿದರು. ಕಾಂಗ್ರೆಸ್‌ನ ಡಿಕೆ ಸುರೇಶ್ ಹಾಗೂ ದಿನೇಶ್ ಗುಂಡೂರಾವ್ ಜತೆಗಿದ್ದರು.
‘ಪ್ರತಾಪ್‌ಗೌಡ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ, ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ’ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಅನಂತರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸಾದ್ನಕ್ಕೆ ಆಗಮಿಸಿ, ಪ್ರಮಾಣ ವಚನ ಸ್ವೀಕರಿಸಿದರು.
Comments are closed.