
ಮೈಸೂರು: ಬಿಜೆಪಿಯಿಂದ ಜೆಡಿಎಸ್ ಶಾಸಕರಿಗೆ ಭರ್ಜರಿ ಆಫರ್ ನೀಡಿರುವುದನ್ನು ಹುಣಸೂರು ಶಾಸಕ ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಬಿಜೆಪಿ ಕೊಟ್ಟ ಆಫರ್ ಅನ್ನು ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು, ಬಿಜೆಪಿಯಿಂದ ಜೆಡಿಎಸ್ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ನೀವು ನನಗೆ ಎಷ್ಟು ಬಾರಿ ಕರೆ ಮಾಡಿದರೂ ಪ್ರಯೋಜನವಿಲ್ಲ. ನಿಮ್ಮ ಕುದುರೆ ವ್ಯಾಪಾರದ ವ್ಯವಹಾರ ಎಎಚ್ ವಿಶ್ವನಾಥ್ ಅವರ ಬಳಿ ನಡೆಯೋದಿಲ್ಲ. ನಾವು ನಿಷ್ಠಾವಂತ ಕಾರ್ಯಕರ್ತರೇ ವಿನಃ, ಅವಕಾಶವಾದಿಗಳಲ್ಲ. ನನ್ನ ತಂದೆಯನ್ನು ಸೆಳೆಯೋ ಪ್ರಯತ್ನ ಫಲಿಸೋದಿಲ್ಲ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ಪೋಸ್ಟ್ ನಲ್ಲಿದೆ.
Comments are closed.