ಕರಾವಳಿ

ಗೆದ್ದರಣ್ಣ ಗೆದ್ದರೋ…ಶ್ರೀನಿವಾಸಣ್ಣ ಗೆದ್ದರೋ!: 56405 ಅಂತರದಲ್ಲಿ ಹಾಲಾಡಿ ಗೆಲುವಿನ ನಗೆ!

Pinterest LinkedIn Tumblr

ಕುಂದಾಪುರ: ಕುಂದಾಪುರದಲ್ಲಿ ಕಳೆದ ನಾಲ್ಕು ಅವಧಿಗೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಮತ್ತೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಬಾರೀ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ವಿರುದ್ಧ ನೇರಾ ಹಣಾಹಣಿ ಏರ್ಪಟ್ಟಿತ್ತು. ಆದರೂ ಹಾಲಾಡಿ ಮಾತ್ರ ತನಗೆ ಸೋಲಿನ ಭಯವೂ ಇಲ್ಲ. ಕುಂದಾಪುರದ ಜನತೆ ಕೈ ಬಿಡಲ್ಲ ಎಂಬ ದೊಡ್ಡ ವಿಶ್ವಾಸದಲ್ಲಿಯೇ ಇದ್ದು ಇಂದಿನ ಮತ ಎಣಿಕೆ ಬಳಿಕ ಆ ವಿಶ್ವಾಸ ನಿಜವಾಗಿದೆ. ಹಾಲಾಡಿಯವರು 103434 ಮತ ಪಡೆದಿದ್ದು 56405 ಮತಗಳ ಅಂತರದಿಂದ ಗೆಲುವು ಸಾಧಿಸಿ ಹೊಸ ದಾಖಲೆ ಮಾಡಿದ್ದಾರೆ.

ಹಾಲಾಡಿ ಶ್ರೀನಿವಾಸ್ ಶೆಟ್ಟಿ. ನಿಜಕ್ಕೂ ಎಲ್ಲರಿಗೂ ಪರಿಚಿತ ಹೆಸರು. ಕಳೆದ ಇಪ್ಪತ್ತು ವರ್ಷಗಳಿಂದ ನಾಲ್ಕು ಬಾರಿ ಶಾಸಕಾರದ ಅವರು ಕಳೆದ ಬಾರಿ ಮಾತ್ರ ಪಕ್ಷೇತ್ರವಾಗಿ ಸ್ಪರ್ಧಿಸಿ 42ಸಾವಿರ ಅಂತರದಿಂದ ಗೆದ್ದಿದ್ದರು. ಇತ್ತೀಚೆಗೆ ಬಿಜೆಪಿ ಮರಳಿದ ಅವರೊಗೆ ಬಿಜೆಪಿಯಿಂದ ಟಿಕೆಟ್ ಲಭಿಸಿತ್ತು. ಅಷ್ಟೇನೂ ಪ್ರಚಾರ, ಸಾರ್ವಜನಿಕ ಸಭೆ, ಮತಬೇಟೆ ಮಾಡದಿದ್ದರೂ ಕೂಡ ಈ ಬಾರಿ ೫೬ ಸಾವಿರ ಮತ ಅಂತರದಲ್ಲಿ ಅವರು ಗೆಲವು ಸಾಧಿಸಿ ತಾನು ಅಜಾತಶತ್ರು ಎಂಬುದನ್ನು ನಿರೂಪಿಸಿದ್ದಾರೆ. ಇನ್ನು ಹಾಲಾಡಿಯವರ ಗೆಲವಿನ ಅಂತರದ ವಿಚಾರ ಈ ಹಿಮ್ದೆಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲೋದು ಗ್ಯಾರೆಂಟಿ ಎಂಬ ಮಾತುಗಳು ಕೇಳಿಬಂದಿತ್ತು.

ಹಾಲಾಡಿ ವಿಜಯದ ಬಳಿಕ ಅವರ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಹಾಲಾಡಿಗೆ ಹಾಗೂ ಮೋದಿಗೆ ಜೈಕಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನು ಹಾಲಾಡಿಯವರ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ 47029 ಮತ ಪಡೆದಿದ್ದಾರೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.