ರಾಷ್ಟ್ರೀಯ

ಲಾಲು ಮಗನ ಮದುವೆಗೆ 50ಕ್ಕೂ ಹೆಚ್ಚು ಆನೆ, ಕುದುರೆ

Pinterest LinkedIn Tumblr


ಪಟನಾ: ಬಿಹಾರ್ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ವಿವಾಹ ಶನಿವಾರ ಅದ್ದೂರಿಯಾಗಿ ಸಂಪನ್ನವಾಗಿದ್ದು ನಿಯಂತ್ರಿಸಲಾಗದಷ್ಟು ಜನಸಾಗರವೇ ಹರಿದು ಬಂದಿದೆ. 7,000ಹೆಚ್ಚು ಅತಿಥಿಗಳು ಮದುವೆಗೆ ಸಾಕ್ಷಿಯಾಗಿದ್ದು 50ಕ್ಕಿಂತ ಹೆಚ್ಚು ಆನೆ ಕುದುರೆಗಳನ್ನೊಳಗೊಂಡ ಮೆರವಣಿಗೆ ಮದುವೆಗೆ ಮೆರಗು ನೀಡಿತ್ತು.

3 ದಿನಗಳ ಪೆರೋಲ್ ಮೇಲೆ ಲಾಲು ಪ್ರಸಾದ್ ಯಾದವ್ ಮದುವೆಗೆ ಆಗಮಿಸಿದ್ದು, ಅದರ ಜತೆಗೆ ವೈದ್ಯಕೀಯ ಕಾರಣಗಳಿಗಾಗಿ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ. ಜೈಲಿನಿಂದ ಸ್ವಲ್ಪ ದಿನಗಳ ರಿಲೀಫ್ ಸಿಕ್ಕಿದ್ದಕ್ಕೆ ಸಂಭ್ರಮಿಸುತ್ತಿರುವ ಲಾಲು, ತಮ್ಮ ಸೊಸೆ ಐಶ್ವರ್ಯ್ ರಾಯ್‌ಗೆ ಫೋನ್ ಕರೆ ಮಾಡಿ ನಿನ್ನಾಗಮನ ನಮ್ಮ ಪಾಲಿಗೆ ಮಂಗಳಕರವಾಗಿದ್ದು ನಮ್ಮ ಕುಟುಂಬಕ್ಕೆ ಅದೃಷ್ಟವನ್ನು ಹೊತ್ತು ತಂದಿರುವೆ, ಎಂದು ಹೇಳಿದ್ದರು.

ಐಶ್ವರ್ಯ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಮೊಮ್ಮಗಳಾಗಿದ್ದಾಳೆ.

ದೇಶದ ಬಹುತೇಕ ಎಲ್ಲ ರಾಜಕೀಯ ಗಣ್ಯರನ್ನು ಲಾಲು ತಮ್ಮ ಪುತ್ರನ ಮದುವೆಗೆ ಆಹ್ವಾನಿಸಿದ್ದರು. ಮದುವೆಯಲ್ಲಿ ಪಾಲ್ಗೊಂಡ ಪ್ರಮುಖ ನೇತಾರರೆಂದರೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಕೇಂದ್ರ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್, ಪಾಟ್ನಾ ಸಾಹೇಬ್ ಸಂಸದ ಶತ್ರುಘ್ನ ಸಿನ್ಹಾ.

Comments are closed.