‘ಕನ್ನಡಿಗ ವರ್ಲ್ಡ್’ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಈ ಬಾರಿ ನಿಮಗೆ ಯಾವ ಸರಕಾರ ಬೇಕು ? ಎಂಬ ಆನ್ ಲೈನ್ ಓಟಿಂಗ್ ಸಮೀಕ್ಷೆ ನಡೆಸಿದ್ದು, ಈ ಓಟಿಂಗ್’ನಲ್ಲಿ ಅತೀ ಹೆಚ್ಚು ಓಟ್ ಬಿದ್ದಿರುವುದು ಬಿಜೆಪಿ ಪಕ್ಷಕ್ಕೆ.
ನಿಮ್ಮ ಮತ ನಿಮ್ಮ ಹಕ್ಕು…, ನಿಮ್ಮ ಮತ ಅಮೂಲ್ಯ ! ಕಡ್ಡಾಯವಾಗಿ ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ…ನಿಮ್ಮ ಒಂದು ಮತ ಅಭಿವೃದ್ಧಿ ಪರ ಇರಲಿ ಸುಭದ್ರಾ ಸರಕಾರ ಬರಲಿ ಎಂಬ ಆಶಯವನ್ನಿಟ್ಟುಕೊಂಡು ‘ಕನ್ನಡಿಗ ವರ್ಲ್ಡ್ ‘ ಆನ್ ಲೈನ್ ಓಟಿಂಗ್ ಸಮೀಕ್ಷೆ ನಡೆಸಿತ್ತು.
ಕರ್ನಾಟಕದ ಬಹುತೇಕ ನಗರ, ಪಟ್ಟಣ ಸೇರಿದಂತೆ ಮೂಲೆ ಮೂಲೆಗಳಿಂದ ಜನ ಆನ್ ಲೈನ್ ಮತದಾನ ಮಾಡಿದ್ದು, ಅವರು ತಮಗೆ ಮುಂದಿನ ಸರಕಾರ ಯಾವುದು ಬೇಕು ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಆನ್ ಲೈನ್ ಓಟಿಂಗ್ ವಿವರ ಈ ಕೆಳಗಿನಂತಿದೆ.
ಬಿಜೆಪಿ- ಸರಕಾರ ಬೇಕೆಂದು 57 % ಜನ
ಕಾಂಗ್ರೆಸ್- ಸರಕಾರ ಬೇಕೆಂದು 22 % ಜನ
ಜೆಡಿಎಸ್- ಸರಕಾರ ಬೇಕೆಂದು 21 % ಜನ
ಈ ಆನ್ ಲೈನ್ ಓಟಿಂಗ್ ಸಮೀಕ್ಷೆಯಲ್ಲಿ ಹೆಚ್ಚು ಮಂದಿ ಬಿಜೆಪಿ ಸರಕಾರ ಬೇಕು ಎಂದು ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮಧ್ಯೆ ನೇರ ಹಣಾಹಣಿ ಇರುವುದರಿಂದ ಕೆಲವೇ ದಿನದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಯಾರು ಸರಕಾರ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments are closed.