ರಾಷ್ಟ್ರೀಯ

ಕನಸಿನಲ್ಲಿ ಬರುವ ದೆವ್ವಗಳನ್ನು ಕೊನೆಗಾಣಿಸಲು 3 ವರ್ಷದ ಬಾಲಕಿಯನ್ನು ಬಲಿಕೊಟ್ಟ ಮಹಿಳೆ !

Pinterest LinkedIn Tumblr

ಚಂಡಿಗಢ: ತನ್ನ ಕನಸಿನಲ್ಲಿ ಬರುವ ದೆವ್ವಗಳನ್ನು ಕೊನೆಗಾಣಿಸಲು ಮಹಿಳೆಯೊಬ್ಬಳು 3 ವರ್ಷದ ಬಾಲಕಿಯನ್ನು ಬಲಿಕೊಟ್ಟ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.

ಹರಿಯಾಣದ ಯಮುನಾನಗರ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬಲಿಯಾದ ಮಗು ಆರೋಪಿ ಮಹಿಳೆಯ ಸಂಬಂಧಿಗಳದಾಗಿತ್ತು ಎನ್ನಲಾಗಿದೆ.

ಮಹಿಳೆಗೆ ರಾತ್ರಿ ಕನಸಿನಲ್ಲಿ ದೆವ್ವಗಳು ಹಿಡಿದುಕೊಂಡಂತೆ ಆಗುತ್ತಿತ್ತು. ಪ್ರತಿ ಬಾರಿ ಈ ಕನಸು ಬೀಳುತ್ತಾ ಮಹಿಳೆ ಭಯ ಭೀತಳಾಗುತ್ತಿದ್ದಳು. ಅದೇ ಕನಸಿನಲ್ಲಿ ಒಮ್ಮೆ ಇಂತಹಾ ಕನಸು ಬರದೆ ಹೋಗಲು ಬಾಲಕಿಯನ್ನು ಬಲಿ ನೀಡಬೇಕೆಂದು ಸೂಚನೆಯಾಗಿತ್ತು. ಇದಕ್ಕಾಗಿ ನಾನು ಮಗುವನ್ನು ಕೊಂದದ್ದಾಗಿ ಮಹಿಳೆ ಪೋಲೀಸರೆದುರು ಒಪ್ಪಿಕೊಂಡಿದ್ದಾಳೆ.

ಶನಿವಾರ ರಾತ್ರಿ ಮಹಿಳೆಯು ಬಾಲಕಿಯನ್ನು ದೇವರ ಕೋಣೆಗೆ ಕರೆತಂದಿದ್ದಾಳೆ. ಅಲ್ಲಿ ಚಾಕುವಿನಿಂದ ಮಗುವಿನ ಕತ್ತು ಸೀಳಿದ್ದಾಳೆ. ಆಗ ನೋವಿನಿಂದ ಮಗು ಜೋರಾಗಿ ಕಿರುಚಿದೆ. ಮಗು ಕಿರುಚುವ ಶಬ್ದ ಕೇಳಿ ಅಕ್ಕ ಪಕ್ಕದ ಮನೆಯವರು ಓಡಿ ಬಂದಾಗ ಕೃತ್ಯ ಬಯಲಾಗಿದೆ.

ತಕ್ಷಣ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲ ನೀಡದೆ ಮಗು ಮರಣಹೊಂದ್ದೆ ಎಂದು ಪೋಲೀಸರು ಹೇ:ಳಿದ್ದಾರೆ.

Comments are closed.