ಅಂತರಾಷ್ಟ್ರೀಯ

ಪಾಕ್‌ ಮಾಜಿ ಪ್ರಧಾನಿ ಷರೀಫ್ ಸಾರ್ವಜನಿಕ, ರಾಜಕೀಯ ಜೀವನ ಅಂತ್ಯ

Pinterest LinkedIn Tumblr


ಇಸ್ಲಮಾಬಾದ್‌: ವಿದೇಶಗಳಲ್ಲಿ ಅಕ್ರಮ ಆಸ್ತಿ ಸಂಗ್ರಹ ಬಗ್ಗೆ ಪನಾಮಾ ಪೇಪರ್’ ದಾಖಲೆ ಸೋರಿಕೆ ಕುರಿತಂತೆ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದ್ದು ಮಾಜಿ ಪ್ರಧಾನಿ ನವಾಜ್‌ ಷರೀಫ್ಗೆ ಜೀವಿತಾವಧಿ ಇರುವವರೆಗೆ ಚುನಾವಣೆಗೆ ಸ್ಪರ್ಧಿಸಲು ಮತ್ತು ಸಾರ್ವಜನಿಕ ಹುದ್ದೆ ಹೊಂದಲು ನಿಷೇಧ ಹೇರಿದೆ.

ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು ನವಾಜ್‌ ಷರೀಫ್ ರಾಜಕೀಯ ಜೀವನ ಅಂತ್ಯಗೊಂಡಿದೆ. ಪಾಕ್‌ ರಾಜಕೀಯದಲ್ಲೂ ಭಾರೀ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಪಾಕ್‌ ಸಂವಿಧಾನದ ಕಲಂ 62(1)(ಎಫ್) ಅಡಿಯಲ್ಲಿ ಈ ನಿಷೇಧವನ್ನು ನ್ಯಾಯಾಲಯ ಹೇರಿದೆ. ಷರೀಫ್ ಮಾತ್ರವಲ್ಲದೆ ತೆಹರೀಕ್‌ -ಇ-ಇನ್‌ಸಾಫ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜಹಾಂಗೀರ್‌ ತಾರೀನ್‌ ಅವರಿಗೂ ನಿಷೇಧ ಹೇರಿದೆ.

2017 ರ ಜುಲೈ ತಿಂಗಳಲ್ಲಿ ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ಪಾಕ್‌ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ದೋಷಿ ಎಂದು ತೀರ್ಪು ನೀಡಿದ್ದ ಬೆನ್ನಲ್ಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

-ಉದಯವಾಣಿ

Comments are closed.