ರಾಷ್ಟ್ರೀಯ

ಅಖಿಲೇಶ್‌-ಮಾಯಾವತಿ ಮೈತ್ರಿಯಲ್ಲಿ ಬಿರುಕು?

Pinterest LinkedIn Tumblr


ಲಖನೌ: ಸಮಾಜವಾದಿ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆಯುವುದಾಗಿ ಬಿಎಸ್‌ಪಿ ವರಿಷ್ಠೆ ಮಾಯಾವತಿ ತಿಳಿಸಿದ್ದು ಅಖಿಲೇಶ್‌ ಬಣಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.

ಗೋರಖ್ಪುರ ಹಾಗು ಫುಲ್ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಗೆಲುವಿನ ಬಳಿಕ, ಕೈರಾನಾ ಲೋಕಸಭಾ ಕ್ಷೇತ್ರ ಹಾಗು ನೂರ್‌ಪುರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗಳ ಮೇಲೆ ಎಸ್‌ಪಿ ಕಣ್ಣಿಟ್ಟಿತ್ತು. ಆದರೆ ಮೈತ್ರಿಯಿಂದ ಬಿಎಸ್‌ಪಿ ಹಿಂದೆ ಸರಿದಿರುವ ಕಾರಣ 2019ರ ಲೋಕಸಭಾ ಚುನಾವಣೆಯವರೆಗೂ ಎಸ್‌ಪಿ ಏಕಾಂಗಿ ಸ್ಫರ್ಧೆ ನಡೆಸಬೇಕಾಗುತ್ತದೆ.

ತಮ್ಮ ಪಕ್ಷದ ಕಾರ್ಯಕರ್ತರ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಯಾವತಿ, “ಗೋರಖ್ಪುರ ಹಾಗು ಫುಲ್ಪುರದಲ್ಲಿಯಂತೆ ಮುಂಬರುವ ಯಾವುದೇ ಉಪಚುನಾವಣೆಯಲ್ಲಿ ಬಿಎಸ್‌ಪಿ ತನ್ನ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದಿಲ್ಲ” ಎಂದಿದ್ದಾರೆ.

ರಾಜ್ಯಸಭಾ ಚುನಾವಣೆ ಮಮುಗಿದ ಮೂರು ದಿನಗಳ ಬಳಿಕ ಮಾಯಾವತಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಸೋಲಿನ ಬಳಿಕ ಮಾತನಾಡಿದ್ದ ಮಾಯಾವತಿ, ತಮ್ಮ ಪಕ್ಷಕ್ಕೆ ಎಸ್‌ಪಿ ನೀಡಿದ್ದ ಬೆಂಬಲಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಬಿಎಸ್‌ಪಿ ಅಭ್ಯರ್ಥಿಯ ಗೆಲುವಿಗೆ ಸ್ವತಂತ್ರ ಶಾಸಕ ರಘುರಾಜ್‌ ಪ್ರತಾಪ್‌ ಸಿಂಗ್‌ ಮೇಲೆ ಅವಲಂಬಿತರಾದ ಅಖಿಲೇಶ್ ಯಾದವ್‌ ರಾಜಕೀಯ ಅಪ್ರಬುದ್ಧತೆ ತೋರಿದರು ಎಂದ ಮಾಯಾವತಿ, “ನಾನೇದರೂ ಅಖಿಲೇಶ್‌ರ ಸ್ಥಾನದಲ್ಲಿದ್ದಿದ್ದರೆ ಮೊದಲು ಬಿಎಸ್‌ಪಿ ಅಭ್ಯರ್ಥಿಗೆ ಪ್ರಾಶಸ್ತ್ಯ ನೀಡುತ್ತಿದ್ದೆ” ಎಂದಿದ್ದಾರೆ.

2019ರಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಎಸ್‌ಪಿ, ಎಸ್‌ಪಿ ಹಾಗು ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಮಾಯಾವತಿ ಇದೇ ಸಂದರ್ಭ ಹೇಳಿದ್ದರು.

ರಾಜ್ಯಸಭಾ ಚುನಾವಣೆಯಿಂದ ಎಸ್‌ಪಿ ಹಾಗು ಬಿಎಸ್‌ಪಿಯ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಯಾವತಿ ಇದೇ ವೇಳೆ ಹೇಳಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ 32 ಮತಗಳಿಸಿದ್ದ ಬಿಎಸ್‌ಪಿ, ಎದುರಾಳಿ ಬಿಜೆಪಿ ವಿರುದ್ಧ ಸೋಲು ಕಂಡಿತ್ತು.

ಕಾಂಗ್ರೆಸ್‌ನ ಏಳು ಶಾಸಕರು ಹಾಗು ಎಸ್‌ಪಿಯ ಏಳು ಶಾಸಕರು ಬಿಎಸ್‌ಪಿ ಅಭ್ಯರ್ಥಿಗೆ ಮತದಾನ ಮಾಡಿದ್ದರು. ಆದರೆ ಎಸ್‌ಪಿಯ ಹತ್ತು ಶಾಸಕರ ಬೆಂಬಲವನ್ನು ಮಾಯಾವತಿ ಕೋರಿದ್ದರು. ಇದೇ ವೇಳೆ ಬಿಎಸ್‌ಪಿ ಅಭ್ಯರ್ಥಿಗೆ ಮತ ನೀಡುವುದಾಗಿ ಹೇಳಿದ್ದ ಆರ್‌ಎಲ್‌ಡಿ ಅಭ್ಯರ್ಥಿಯ ಮತ ಅಸಿಂಧುವಾದ ಕಾರಣ ಬಿಜೆಪಿಗೆ ಲಾಭವಾಗಿತ್ತು.

Comments are closed.