ಕರ್ನಾಟಕ

2 ಲಕ್ಷ ಕೋಟಿ ರು. ವೆಚ್ಚದಲ್ಲಿ ಐದು‌ ನದಿ‌ಗಳ ಜೋಡಣೆ: ಗಡ್ಕರಿ

Pinterest LinkedIn Tumblr


ಬೆಳಗಾವಿ: ದೇಶದಲ್ಲಿ 2 ಲಕ್ಷ ಕೋಟಿ ರು. ವೆಚ್ಚದಲ್ಲಿ ಐದು‌ ನದಿ‌ಗಳ ಜೋಡಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಸೋಮವಾರ ಸುವರ್ಣ ವಿಧಾನ ಸೌಧದಲ್ಲಿ ಹಲಗಾದಿಂದ ಖಾನಾಪುರ ವರೆಗೆ 856.2 ಕೋಟಿ ರೂ. ವೆಚ್ಚದಲ್ಲಿ ಹಾಗೂ ಖಾನಾಪುರದಿಂದ ಗೋವಾ ಗಡಿಯವರೆಗೆ 486.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಚತುಷ್ಪಥ ಹೆದ್ದಾರಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡಿ, ದೇಶದಲ್ಲಿ ನೀರಿನ ಸಮಸ್ಯೆ ಎಲ್ಲ ಕಡೆ ಇದೆ. ಕೆಲ ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರತೆ ಹೆಚ್ಚಿದೆ. ಈ ಬಿಟ್ಟಿನಲ್ಲಿ ದೇಶದ ಐದು ನದಿ ಜೋಡಣೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನದಿ ಜೋಡಣೆ ಮೊದಲು ಛತ್ತಿಸಗಡದಿಂದ ತೆಲಂಗಾಣದಲ್ಲಿ ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ 6660 ಹೆದ್ದಾರಿ ಇದ್ದವು. ಈಗ ದ್ವೀಗುಣವಾಗಿವೆ. ಹೆದ್ದಾರಿ ನಿರ್ಮಾಣದ ಮೂಲಕ ದೇಶದ ವಿಕಾಸ ಮಾಡಲಾಗುತ್ತಿದೆ ಎಂದರು.
ಬೆಳಗಾವಿಯಲ್ಲಿ 55 ಕಿಮೀ ರಿಂಗ್ ರೋಡನ್ನು 300 ಸಾವಿರ ಕೋಟಿ ರು.ಗಳಲ್ಲಿ ನಿರ್ಮಿಸಲಾಗುವುದು ಎಂದ ಅವರು ಸದ್ಯ ಬೆಳಗಾವಿ – ಗೋವಾದ ಎರಡು ಹಂತದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ 200 ವರ್ಷದ ವರೆಗೆ ಬಾಳಿಕೆ ಬರಲಿದೆ ಎಂದರು.

Comments are closed.