
ತುಮಕೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಪರಮೇಶ್ವರ್‌ರವರನ್ನು ಕುತಂತ್ರದಿಂದ ಸೋಲಿಸಿದ್ದು ಸಿದ್ದರಾಮಯ್ಯನವರು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೇವಡಿ ಮಾಡಿದರು.
ತಾಲೂಕಿನ ಹೊನ್ನುಡಿಕೆ ಹೋಬಳಿಯ ಹೊಳಕಲ್ಲು ಗ್ರಾಮದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾವತಿಯಿಂದ ಹಮ್ಮಿಕೊಂಡಿದ್ದ ಮುಷ್ಠಿಧಾನ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಬಾರಿ ಸೋಲಿಸಿದ್ದ ಸಿದ್ದರಾಮಯ್ಯ ನೈತಿಕತೆ ಕಳೆದುಕೊಂಡಿದ್ದು, ಕೊರಟಗೆರೆಗೆ ಬಂದು ಪರಮೇಶ್ವರ್‌ರವರನ್ನು ಗೆಲ್ಲಿಸಬೇಕೆಂದು ಉದುದ್ದ ಭಾಷಣ ಮಾಡುತ್ತಿದ್ದಾರೆ. ಇವರಿಗೆ ಜನರೇ ಬುದ್ದಿಕಲಿಸುತ್ತಾರೆ ಎಂದರು.
ರಾಜ್ಯ ಸರಕಾರ 1 ಸರಕಾರ ಎಂದು ಬೊಗಳೆ ಬಿಡುತ್ತಿದೆ. ನೀರಾವರಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಪುಟಗಟ್ಟಲೆ ಜಾಹೀರಾತು ನೀಡಿ ರಾಜ್ಯ ಸರಕಾರದ ಬೊಕ್ಕಸಕ್ಕೆ ನಷ್ಟದ ಜತೆಗೆ ನಾಡಿನ ಜನತೆಯ ದಿಕ್ಕು ತಪ್ಪಿಸುವ ಕೆಲಸದಲ್ಲಿ ಸರಕಾರ ತೊಡಗಿದೆ ಎಂದು ಕಿಡಿಕಾರಿದರು.
Comments are closed.