ಕರ್ನಾಟಕ

ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಪವರ್​ಸ್ಟಾರ್!

Pinterest LinkedIn Tumblr


ಮೈಸೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶನಿವಾರ ಬೆಳಗ್ಗೆ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತುವ ಮೂಲಕ ಚಾಮುಂಡಿ ದೇವಿಯ ದರ್ಶನ ಪಡೆದರು.

ಪುನೀತ್​ ಚಾಮುಂಡಿ ಬೆಟ್ಟಕ್ಕೆ ಬಂದಿರುವ ವಿಷಯ ತಿಳಿದ ಅಭಿಮಾನಿಗಳು, ಪುನೀತ್​ ಜತೆಗೂಡಿ ಖುಷಿಯಿಂದ ಬೆಟ್ಟ ಹತ್ತಿದರು. ಶಕ್ತಿಧಾಮ ಕಟ್ಟಡ ಉದ್ಘಾಟನೆಗೆ ತೆರಳಿದ್ದ ಪುನೀತ್ ರಾಜ್​ಕುಮಾರ್​, ಕಾರ್ಯಕ್ರಮಕ್ಕೆ ಹೋಗುವ ಮುಂಚೆ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರತಿ ಬಾರಿ ಚಾಮುಂಡಿ ಬೆಟ್ಟಕ್ಕೆ ತೆರಳಿದರೂ ಪುನೀತ್ ಬರಿಗಾಲಿನಲ್ಲೇ ಬೆಟ್ಟ ಹತ್ತಿ ತಾಯಿ ದರ್ಶನ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ.

Comments are closed.