
ನವದೆಹಲಿ: ಭಾರತ ಮಾನವ ಶಕ್ತಿ, ಕೌಶಲ್ಯ, ಸಂಪನ್ಮೂಲಗಳನ್ನು ಹೊಂದಿದ್ದು, ನಾವು ಮಿಷನ್ ಮೋಡ್ ನಲ್ಲಿ ಕೆಲಸ ಮಾಡಬೇಕಿದೆ. ದೇಶದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ರಾಜಧಾನಿ ದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ರಾಷ್ಟ್ರೀಯ ಶಾಸಕಾಂಗ ಸಭೆಯನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿರುವ ಅವರು, ಭಾರತ ಮಾನವ ಶಕ್ತಿ, ಕೌಶಲ್ಯಗಳು ಹಾಗೂ ಸಂಪನ್ಮೂಲಗಳನ್ನು ಹೊಂದಿದೆ. ನಾವು ಮಿಷನ್ ಮೋಡ್ ನಲ್ಲಿ ಕೆಲಸ ಮಾಡಿ ಧನಾತ್ಮಕ ಬದಲಾವಣೆಗಳನ್ನು ತರಬೇಕಿದೆ. ನಮ್ಮ ಗುರಿ ಸಾಮಾಜಿಕ ನ್ಯಾಯವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿರುವ ಹಲವಾರು ರಾಜ್ಯಗಳ ಪೈಕಿ ಕೆಲವು ರಾಜ್ಯಗಳಲ್ಲಿ ಅಭಿವೃದ್ಧಿಯಲ್ಲಿ ಅಳೆಯಬಹುದಾದಂತರ ಮುಖ್ಯ ಅಂಶಗಳು ಪ್ರಬಲವಾಗಿವೆ. ಅದರಿಂದ ನಾವು ಕಲಿತು, ದುರ್ಬಲಗೊಂಡಿರುವ ಜಿಲ್ಲೆಗಳಲ್ಲಿ ಕೆಲಸ ಮಾಡಬೇಕು. ಸ್ಪರ್ಧಾತ್ಮಕತೆ ಮತ್ತು ಸಹಕಾರಿ ಸಂಯುಕ್ತ ವ್ಯವಸ್ಥೆ ದೇಶಕ್ಕೆ ಉತ್ತಮವಾಗಿರುತ್ತದೆ.
ಸಾರ್ವಜನಿಕರು ಪಾಲ್ಗೊಳ್ಳುವುದು ದೇಶದ ಅಭಿವೃದ್ಧಿಗೆ ಬಹುಮುಖ್ಯವಾಗಿರುತ್ತದೆ. ಅಧಿಕಾರಿಗಳು ಜನರೊಂದಿಗೆ ಕೆಲಸ ಮಾಡುವುದು ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನರನ್ನು ಪಾಲ್ಗೊಳ್ಳುವಂತೆ ಮಾಡುವುದರ ಫಲಿತಾಂಶ ಪರಿವರ್ತನೆಯಾಗಿರುತ್ತದೆ. ಸುಧಾರಣೆ ಅಗತ್ಯವಿರುವ ಜಿಲ್ಲೆಗಳ ಪ್ರದೇಶಗಳನ್ನು ಗುರ್ತಿಸಿ ಮತ್ತು ಅದರ ನ್ಯೂನತೆಗಳನ್ನು ಪರಿಹರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
Comments are closed.