
ಹೈದರಾಬಾದ್: ಮಧ್ಯರಾತ್ರಿವರೆಗೂ ಮಗ ಮೊಬೈಲ್ ಹಿಡಿದು ಪೋರ್ನ್ ವಿಡಿಯೋ ನೋಡುತ್ತಿದ್ದ ಎಂದು ತಂದೆಯೇ ತನ್ನ ಮಗನ ಕೈ ಕಟ್ ಮಾಡಿದ ಘಟನೆ ಸೋಮವಾರದಂದು ಹೈದರಾಬಾದ್‍ನ ಪಹದಿಶರೀಫ್ ಹೊರವಲಯದಲ್ಲಿ ನಡೆದಿದೆ.

ಖಾಲೀದ್ ಖುರೇಶಿ(19) ಕೈ ಕಳೆದುಕೊಂಡ ಯುವಕ. ಖಾಲೀದ್ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದನು. ಮಧ್ಯರಾತ್ರಿವರೆಗೂ ಫೋನ್‍ನಲ್ಲಿ ಪೋರ್ನ್ ವಿಡಿಯೋವನ್ನು ನೋಡುತ್ತಿದ್ದನು. ಇದರಿಂದ ಕೋಪಗೊಂಡ ಆತನ ತಂದೆ ಖಾಯುಮ್ ಖುರೇಶಿ, ಖಾಲೀದ್ ಗೆ ಫೋನ್ ಕಡಿಮೆ ಉಪಯೋಗಿಸು ಎಂದು ಎಚ್ಚರಿಕೆ ನೀಡಿದ್ದರು.
ತಂದೆಯ ಮಾತಿನಿಂದ ಕೋಪಗೊಂಡು ಖಾಲೀದ್ ಮನೆಯಿಂದ ಹೊರಗೆ ಹೋಗಿದ್ದ. ನಂತರ ರಾತ್ರಿ ಮನೆಗೆ ಹಿಂದುರುಗಿದಾಗ ಖಾಲೀದ್ ತನ್ನ ಫೋನಿನಲ್ಲಿ ಮತ್ತೆ ಪೋರ್ನ್ ವಿಡಿಯೋ ನೋಡುತ್ತಿದ್ದನು. ಇದರಿಂದ ಮತ್ತಷ್ಟು ಕೋಪಗೊಂಡ ತಂದೆ ಸೋಮವಾರ ಆತ ಮಲಗಿದ್ದ ವೇಳೆ ಆತನ ಬಲಗೈಯನ್ನೇ ಕಟ್ ಮಾಡಿದ್ದಾರೆ.
ಖಲೀದ್ ನೋವಿನಿಂದ ಜೋರಾಗಿ ಕಿರುಚಿಗೊಂಡಾಗ ಮನೆಯವರಿಗೆ ಎಚ್ಚರವಾಗಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕೈ ಮರುಜೋಡಣೆ ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಖಾಲೀದ್ ತಂದೆ ಖಾಯುಮ್ ನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.
Comments are closed.