
ಮುಂಬೈ: ಮುಂಬೈನ ನಟ ಅನಿಲ್ ಕಪೂರ್ ನಿವಾಸದಲ್ಲಿ ಕಳೆದ ವಾರ ಮೃತಪಟ್ಟ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭವಾಗಿದ್ದು, ಬಾಲಿವುಡ್, ಟಾಲಿವುಡ್. ಕಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದ ಗಣ್ಯಾತಿ ಗಣ್ಯರು ನಟಿ ಶ್ರೀದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಲೋಖಂಡ್ ವಾಲಾದಲ್ಲಿರುವ ಅನಿಲ್ ಕಪೂರ್ ನಿವಾಸದಲ್ಲಿ ನಟ ಅಮಿತಾಬ್ ಬಚ್ಚನ್, ಹೇಮಾಮಾಲಿನಿ, ಜಯಪ್ರದಾ, ಟಬು, ಸೇರಿದಂತೆ ಗಣ್ಯಾತಿ ಗಣ್ಯ ನಟ-ನಟಿಯರು ಹಾಗೂ ಖ್ಯಾತ ನಿರ್ದೇಶಕ ನಿರ್ಮಾಪಕರು ನಟಿ ಶ್ರೀದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ 9.30ರಿಂದ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮುಂಬೈನ ಸೆಲೆಬ್ರೇಷನ್ ಕ್ಲಬ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. 12.30ರವರೆಗೂ ಸಾರ್ವಜನಿಕ ದರ್ಶನ ನಡೆಯಲಿದ್ದು, ಬಳಿಕ ಕ್ಲಬ್ ನಿಂದಲೇ ಪವನ್ ಹನ್ಸ್ ಬಳಿ ಇರುವ ವಿಲೆ ಪಾರ್ಲೆ ಚಿತಾಗಾರದವರೆಗೂ ಪಾರ್ಥೀವ ಶರೀರದ ಮೆರವಣೆಗೆ ಸಾಗಲಿದೆ. ಬಳಿಕ ಸಂಜೆ 7 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇನ್ನು ಅಂತ್ಯಕ್ರಿಯೆ ನಡೆಯುವ ಮತ್ತು ಪಾರ್ಥೀವ ಶರೀರದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಭದ್ರತೆಗಾಗಿ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ.
ಪುರುಷ ಸೂಪರ್ ಸ್ಟಾರ್ ಗಳಿದ್ದ ಕಾಲದಲ್ಲಿ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂಬ ಕೀರ್ತಿಗೆ ಭಾಜನರಾಗಿದ್ದ ಶ್ರೀದೇವಿ ಅವರು ದುಬೈನಲ್ಲಿ ಬಾತ್ ಟಬ್ ನಲ್ಲಿ ಬಿದ್ದು ಸಾವಿಗೀಡಾಗಿದ್ದರು.
Comments are closed.