ಕರಾವಳಿ

ಶಿರೂರು ಮಠದ ಗೋಶಾಲೆಯಿಂದ ಗೋಕಳ್ಳತನ: ಸಿ.ಸಿ. ಕ್ಯಾಮೆರದಲ್ಲಿ ಗೋಕಳ್ಳರ ಕೈಚಳಕ ಸೆರೆ!

Pinterest LinkedIn Tumblr

ಉಡುಪಿ: ಇತ್ತೀಚೆಗೆ ಉಡುಪಿಯ ಶಿರೂರು ಮಠದ ಗೋಶಾಲೆಯಿಂದ ಗೋ ಕಳ್ಳತನ ಅಗಿರೊ ಬೆನ್ನಲ್ಲೆ ಮತ್ತೊಂದು ಪ್ರಕರಣ ನಡೆದಿದೆ.

ಮಠದ ಗೋಶಾಲೆಯಿಂದ ಗೋ ಕಳ್ಳರು ಗೋವನ್ನು ಎಳೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಅಗಿದೆ. ಎರಡು ದಿನಗಳ ಹಿಂದೆ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯಾವುದೇ ಭಯವಿಲ್ಲದೇ ಮಠದ ಗೋಶಾಲೆ ನುಗ್ಗಿ ದನವನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ. ಕೆಲವು ದಿನಗಳ ಹಿಂದೆ ಸ್ವಾಮೀಜಿಯ ಕಾರಿಗೆ, ಸ್ಕಾರ್ಫಿಯ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದರು.ಇದು ದನ‌ಗಳ್ಳರದ್ದೇ ಕೃತ್ಯ ಎಂದು‌ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದೀಗ ಮತ್ತೆ ದನಗಳ್ಳರು ಮಠದಿಂದ ದನ‌ ಕದ್ದೊಯ್ದಿದ್ದು ಇದರ ದೃಶ್ಯ ವೈರಲ್ ಆಗಿದೆ.ಹಿರಿಯಡ್ಕ ಪೊಲೀಸ್ ಠಾಣೆಗೆ ಸಿಸಿಟಿವಿ ದೃಶ್ಯವಳಿಗಳನ್ನು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.