ಅಂತರಾಷ್ಟ್ರೀಯ

ಕೊನೆಯ ಐಸಿಸ್‌ ಜಿಹಾದಿ ಕೇಂದ್ರದ ಮೇಲೆ ಬಾಂಬ್‌: 25 ಪೌರರು ಬಲಿ

Pinterest LinkedIn Tumblr


ಬೇರೂತ್‌ : ಇಸ್ಲಾಮಿಕ್‌ ಉಗ್ರ ಜಿಹಾದಿಗಳ ಪೂರ್ವ ಸಿರಿಯದಲ್ಲಿನ ಕೊನೆಯ ಕೇಂದ್ರದ ಮೇಲೆ ನಡೆಸಲಾಗಿರುವ ವೈಮಾನಿಕ ಬಾಂಬ್‌ ದಾಳಿಗೆ ಏಳು ಮಕ್ಕಳು ಸೇರಿದಂತೆ 25 ಪೌರರು ಬಲಿಯಾಗಿರುವುದಾಗಿ ವಿಚಕ್ಷಣಕಾರರು ಇಂದು ತಿಳಿಸಿದ್ದಾರೆ.

ಇರಾಕ್‌ ಗಡಿ ಸಮೀಪದಲ್ಲಿ ಐಸಿಸ್‌ ಉಗ್ರ ಅಲ್‌ಬು ಕಮಾಲ್‌ನ ಹಿಂದಿನ ಭದ್ರ ಕೋಟೆಯ ಉತ್ತರಕ್ಕಿರುವ ಅಲ್‌ ಶಾಫಾ ಗ್ರಾಮದ ಮೇಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿನ್ನೆ ಭಾನುವಾರ ವೈಮಾನಿಕ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ತಿಳಿಸಿದೆ.

ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಈ ವೈಮಾನಿಕ ದಾಳಿ ನಡೆಸಿರುವುದಾಗಿ ಬ್ರಿಟನ್‌ ಮೂಲದ ವಿಚಕ್ಷಣ ಸಂಸ್ಥೆಯ ಮುಖ್ಯಸ್ಥ ರಾಮಿ ಅಬ್‌ದೇಲ್‌ ರೆಹಮಾನ್‌ ತಿಳಿಸಿದ್ದಾರೆ.

-ಉದಯವಾಣಿ

Comments are closed.