
ಮಂಗಳೂರು : ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆಬ್ರವರಿ 20ರಂದು ಮಂಗಳವಾರ ಸಂಜೆ 6.00 ಗಂಟೆಗೆ ಮಹಾ ಆಶ್ಲೇಷ ಬಲಿ ನಡೆಯಲಿದೆ.
ಅಂದು ಬೆಳಿಗ್ಗೆ 5ರಿಂದ ಪ್ರಾಯಶ್ಚಿತ ಹೋಮ, 7.30ರಿಂದ ನಾಗವನದಲ್ಲಿ ನಾಗದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಸರ್ಪ ಸೂಕ್ತ ಹೋಮ, ಮೃತ್ಯುಂಜಯ ಹೋಮ, ಬ್ರಹ್ಮಚಾರಿ ಆರಾಧನೆ, ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ ನಡೆಯಲಿದೆ.
ಸಂಜೆ 6ರಿಂದ ದೇವಾಲಯದ ಹೊರಾಂಗಣದಲ್ಲಿ ಏಕಕಾಲದಲ್ಲಿ 48 ಆಶ್ಲೇಷ ಆಶಷಾ ಬಲಿ ನಡೆಯಲಿದ್ದು ಬಳಿಕ 7ರಿಂದ ರಾತ್ರಿ ಪೂಜೆ, ನಿತ್ಯ ಬಲಿ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು :
ಮಧ್ಯಾಹ್ನ 2ರಿಂದ 4.30ರವರೆಗೆ ಮಕ್ಕಳ ಯಕ್ಷಗಾನ ಬಳಿಕ ನೃತ್ಯ ಸಿಂಚನ, ಭಕ್ತಿ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ ಜರಗಲಿದೆ.
Comments are closed.