ರಾಷ್ಟ್ರೀಯ

ಅಸ್ಸಾಂ : ರೈತರಿಗೆ ಟ್ರಾಕ್ಟರ್‌ ಹಂಚುವಲ್ಲಿ ಭಾರೀ ಭ್ರಷ್ಟಾಚಾರ?

Pinterest LinkedIn Tumblr


ಗುವಾಹಟಿ: ರೈತರಿಗೆ ಟ್ರಾಕ್ಟರ್‌ ಹಂಚುವಲ್ಲಿ ಭಾರೀ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಅಸ್ಸಾಂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿರುವ ದೇವವ್ರತ ಸೈಕಿಯಾ ಅವರು ದೂರಿದ್ದಾರೆ.

ಈ ಭ್ರಷ್ಟಾಚಾರದ ತನಿಖೆಗೆ ಸರ್ವ ಪಕ್ಷಗಳ ಸಮಿತಿಯೊಂದನ್ನು ರೂಪಿಸಬೇಕು ಎಂದವರು ಆಗ್ರಹಿಸಿದರು.

ಹಿರಿಯ ಕಾಂಗ್ರೆಸ್‌ ಶಾಸಕರಾಗಿರುವ ಸೈಕಿಯಾ ಅವರು ರಾಜ್ಯದಲ್ಲಿ ಕೋಲ್‌ ಇಂಡಿಯಾದಿಂದ ಭಾರೀ ಗಣಿ ಅಕ್ರಮ ನಡೆದಿದ್ದು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

-ಉದಯವಾಣಿ

Comments are closed.