ಉಡುಪಿ: ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹಾಗೂ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ವಿರುದ್ಧ , ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಕಳೆದ ವಾರ ಕಾರ್ಕಳ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ದ ಪ್ರತಿಭಟನೆಯನ್ನ ನಡೆಸಿದ್ದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹಾಗೂ ಮಾಜಿ ಶಾಸಕರಾದ ಗೋಪಾಲ ಭಂಢಾರಿ ವಿರುದ್ದ ಸುನೀಲ್ ಕುಮಾರ್ ಟೀಕಾ ಪ್ರಹಾರವನ್ನು ಮಾಡಿದ್ದರು. ಇದರಿಂದ ಆಕ್ರೋಷಿತರಾದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸುನೀಲ್ ಕುಮಾರ್ ವಿರುದ್ದ ಪ್ರತಿಭಟನೆ ನಡೆಸಿದರು . ಕಾರ್ಕಳದ ಆನಂತ ಶಯನ ವೃತ್ತದಿಂದ ಬಂಡೀಮಠ ಬಸ್ ನಿಲ್ದಾಣದವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯನ್ನ ನಡೆಸಿದರು..ಕಾಂಗ್ರೆಸ್ ಮುಖಂಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು. ಕಾಂಗ್ರೆಸ್ ಮುಖಂಡರ ವಿರುದ್ದ ಅವಹೇಳಕಾರಿ ಹೇಳಿಕೆ ನೀಡಿರುವ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರತಿಭಟನಾ ಮೆರವಣಿಗೆಯ ಬಳಿಕ ಯುವ ಕಾಂಗ್ರೆಸ್‍ನಿಂದ ಕಾರ್ಕಳದ ಬಂಡೀ ಮಠದ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಕಾಂಗ್ರೆಸ್ ಯುವ ಮುಖಂಡ ಅಮೃತ್ ಶೆಣೈ ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು, ಬಿಜೆಪಿ ಗೋ ಹತ್ಯೆ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್‍ನಲ್ಲಿರುವವರಿಗೂ ಗೋವಿನ ಬಗ್ಗೆ ಕಾಳಜಿ ಇದೆ. ಆದ್ರೆ ಬಿಜೆಪಿಗರು ಇದನ್ನೇ ಬಂಡವಾಳನ್ನಾಗಿಟ್ಟುಕೊಂಡು ಹಿಂದೂ ಮುಗ್ದ ಯುವಕರನ್ನು ತಮ್ಮ ರಾಜಕೀಯ ಷಡ್ಯಯಂತ್ರಕ್ಕೆ ಬಳಸುತ್ತಿದೆ. ಕಾರ್ಕಳದ ಪುರಸಭೆಯನ್ನು ಲ್ಯಾಟಿನ್ ಬೆಳಕಿನ ಮೂಲಕ ಹುಡುಕುವಂತೆ ಕಾರ್ಕಳ ಶಾಸಕರು ಹಾಗೂ ಅವರ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದಾರೆ. ಇದು ನಿಜಕ್ಕೂ ಶಾಸಕರ ಮೂರ್ಖತನಕ್ಕೆ ಕೈಕನ್ನಡಿ. ಪುರಸಭೆ ಒಂದು ಕಟ್ಟಡ. ಕಟ್ಟಡ ಹುಡುಕಲು ಇವರಿಗೆ ಲ್ಯಾಟಿನ್ ಬೆಳಕಿನ ಅವಶ್ಯಕತೆ ಬೇಕೆ ಎಂದು ಪ್ರಶ್ನಿಸಿದ್ರು. ಇವರಿಗೆ ಕಾರ್ಕಳ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಾಳಜಿಯಿದ್ದರೇ ಪುರಸಭೆಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕಿತ್ತು. ಒಂದು ನಯ ಪೈಸೆ ಪುರಸಭೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡದೇ ಕಾಂಗ್ರೆಸ್ ಹಿರಿಯ ಮುಖಂಡರ ಮೇಲೆ ಗೂಬೆ ಕೂರಿಸುವ ಸುನೀಲ್ ಕುಮಾರ್‍ಗೆ ನಾಚಿಕೆಯಾಗಬೇಕು. ಕ್ಷೇತ್ರದ ಜನರ ಮತವನ್ನು ಪಡೆದು ಆ ಕ್ಷೇತ್ರದ ಜನರಿಗೆ ದುಡಿಯದೇ ಪದೇ ಪದೇ ಕಾಣೆಯಾಗುತ್ತಿರುವ ಸಂಸದೆ ಶೋಭಾ ಕರದ್ಲಾಂಜೆ ಅವರನ್ನು ಲ್ಯಾಟಿನ್ ಬೆಳಕಿನಲ್ಲಿ ಹುಡುಕುವ ಕೆಲಸ ಶಾಸಕರು ಮೊದಲು ಮಾಡಲಿ. ರಾಜ್ಯ ಹಾಗೂ ದೇಶದ ಅಭಿವೃದ್ದಿಗೆ ಹಗಲಿರುಳು ದುಡಿದ ವೀರಪ್ಪ ಮೊಯ್ಲಿಯಂತಹ ಜನ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸುನೀಲ್ ಕುಮಾರ್ ಮನಸ್ಥಿತಿ ಎಂತಹುದು ಅನ್ನೋದು ಅರ್ಥವಾಗುತ್ತೇ ಎಂದು ಶಾಸಕ ಸುನೀಲ್ ಕುಮಾರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪದ್ಯಾಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಈ ಸಂದರ್ಭ ಮಾತನಾಡಿದ್ರು, ಕಾಂಗ್ರೆಸ್‍ನ ಶಕ್ತಿ ಹುಡುಗಿದೆ ಎಂಬ ಪರಿಕಲ್ಪನೆ ವಿರೋದ ಪಕ್ಷ ಬಿಜೆಪಿ ಹಾಗೂ ಕಾರ್ಕಳ ಶಾಸಕರಲ್ಲಿದೆ. ಪಕ್ಷವನ್ನು ಬಡಿದೇಳಿಸುವ ಹಾಗೂ ವಿರೋದಿಗಳಿಗೆ ಎಚ್ಚರಿಸುವ ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಗೋಪಾಲ ಭಂಢಾರಿ ಹಾಗೂ ವೀರಪ್ಪ ಮೋಯ್ಲಿ ಯಂತಹ ಕಾಂಗ್ರೆಸ್ ನಾಯಕರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವುದು ಶಾಸಕರಿಗೆ ಶೋಭೆ ತರುವಂತಹದಲ್ಲ. ಕಾಂಗ್ರೆಸ್ ನಾಯಕರ ವಿರುದ್ದ ಹೇಳಿಕೆ ನೀಡುವ ಬದಲು ಶಾಸಕರು ಕಾರ್ಕಳ ಅಭಿವೃದ್ದಿಯ ಬಗ್ಗೆ ಗಮನ ನೀಡಲಿ. ಇವರ ವರ್ತನೆಗೆ ಮುಂದಿನ ದಿನಗಳಲ್ಲಿ ಕಾರ್ಕಳದ ಜನತೆ ತಕ್ಕ ಪಾಠ ಕಲಿಸಲಿದ್ದೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಕಳದಲ್ಲಿ ಅಧಿಕಾರದ ಗದ್ದುಗೇ ಎರಲಿದೆ ಎಂದ್ರು.
ಇನ್ನೂ ಕಾಂಗ್ರೆಸ್ಸಿಗರು ಗೋ ಹತ್ಯೆ ಬೆಂಬಲಿಗರು ಎಂದು ಬಿಂಬಿಸುವ ಬಿಜೆಪಿಗೆ ಸಡ್ಡು ಹೊಡೆಯಲು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಇದೇ ಸಂದರ್ಭ ಗೋವುಗಳನ್ನು ದಾನ ಮಾಡಿದ್ರು. ಈ ಮೂಲಕ ಗೋವುಗಳನ್ನು ಕಾಂಗ್ರಸ್ಸಿಗರು ಪೂಜನೀಯ ದೃಷ್ಟಿಯಿಂದ ನೋಡುತ್ತಾರೆ ಎಂದು ಪ್ರತಿರೂಪಿಸಿದ್ರು. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ವಿಶ್ವಾಸ್ ಅಮೀನ್, ಕಾರ್ಕಳ ಯುವ ಕಾಂಗ್ರೆಸ್ ಅದ್ಯಕ್ಷ ದೀಪಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ರು
Comments are closed.