
ಮುಂಗೋಪದ ಮುಖದಿಂದಲೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಬೆಕ್ಕು ಇದೀಗ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣವೊಂದರಲ್ಲಿ 4.51 ಕೋಟಿ ರೂ. ಪರಿಹಾರ ಧನ ಗೆದ್ದಿದೆ.
ಲಾಸ್ ಏಂಜಲೀಸ್ನ ಗ್ರೆನೇಡ್ ಬ್ರೇವರೇಜ್ ಸಂಸ್ಥೆ ತನ್ನ ಐಸ್ಡ್ ಕೋಲ್ಡ್ ಕಾಫಿ ಡ್ರಿಂಕ್ನ ಪ್ರಚಾರಕ್ಕಾಗಿ ಮುಂಗೋಪಿ ಬೆಕ್ಕಿನ ಚಿತ್ರವನ್ನು ಬಳಸಿಕೊಳ್ಳಲು ಬೆಕ್ಕಿನ ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಐದು ವರ್ಷಗಳ ಕಾಲ ಬೆಕ್ಕಿನ ಚಿತ್ರವಿರುವ ಗ್ರನೇಡ್ ಸಂಸ್ಥೆ ಡ್ರಿಂಕ್ಗಳು ಭಾರಿ ಖ್ಯಾತಿ ಪಡೆದಿದ್ದವು. ಆದರೆ ಇತ್ತೀಚೆಗೆ ಬೆಕ್ಕಿನ ಮಾಲೀಕ ಕಂಪನಿ ಒಪ್ಪಂದದ ವಿರುದ್ಧ ಕೋರ್ಟಿಗೆ ಹೋಗಿದ್ದರು. ಕೋಲ್ಡ್ ಕಾಫಿಗೆ ಬಳಸಿಕೊಳ್ಳುತ್ತೇವೆಂದು ಹೇಳಿದ್ದ ಚಿತ್ರವನ್ನು ಗ್ರೌಂಡ್ ಕಾಫಿಗೂ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅಲ್ಲಿ ಬೆಕ್ಕಿಗೆ ಜಯವಾಗಿದ್ದು, ಪರಿಹಾರಧನ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. 2012ರಲ್ಲಿ ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಮೂಡಿಸಿದ ಬೆಕ್ಕು ನಂತರದ ದಿನಗಳಲ್ಲಿ ತನ್ನ ಮುಂಗೋಪಿ ಮುಖದ ಕಾರಣದಿಂದಲೇ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಅವಕಾಶ ಪಡೆದುಕೊಂಡಿತ್ತು.
Comments are closed.