
( ಸಾಂದರ್ಭಿಕ ಚಿತ್ರ )
ಮಂಗಳೂರು: ಮೂಡಬಿದ್ರೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೇಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಕೊಂಡಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವ ಬೆನ್ನಲ್ಲೇ ಇದೀಗ ವಿದ್ಯಾರ್ಥಿನಿಯ ಫೋಷಕರ ಮಧ್ಯೆ ಪ್ರವೇಶದ ಬಳಿಕ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ.
ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚಿತ್ರದುರ್ಗದ ಮೂಲದ ರಚನಾ (18) ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಈಗಾಗಲೇ ಹೆಚ್ಚಿನ ಮಾಧ್ಯಮಗಳಲ್ಲಿ ಸುದ್ಧಿ ಹಬ್ಬಿತ್ತು. ಮಾತ್ರವಲ್ಲದೇ ಹತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದಿಟ್ಟಿದ್ದಾಳೆ ಎನ್ನಲಾದ ಡೆತ್‌ನೋಟ್ ಆನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿ ತನ್ನ ಅನಾರೋಗ್ಯದ ಬಗ್ಗೆ ಉಲ್ಲೇಖಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಮೂಲತಃ ಚಿತ್ರದುರ್ಗದವಳಾದ ರಚನಾ ಸಾವಿನ ಸುದ್ದಿ ಬಂದ ಕೂಡಲೇ ಆಕೆಯ ಹೆತ್ತವರು ಮೂಡುಬಿದ್ರೆಗೆ ಆಗಮಿಸಿದ್ದು, ಡೆತ್ ನೋಟ್‌ನಲ್ಲಿರುವ ಅಕ್ಷರವಾಗಲೀ, ಸಹಿಯಾಗಲೀ ತಮ್ಮ ಮಗಳದ್ದಲ್ಲ ಎಂದು ರಚನಾ ಹೆತ್ತವರು ಆರೋಪಿಸಿದ್ದಾರೆ. ಇದರಿಂದ ಪ್ರಕರಣತಿರುವು ಪಡೆದುಕೊಂಡಿದೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ರಚನಾ, ಗುರುವಾರ ಕಾಲೇಜಿಗೆ ಸ್ಟಡಿ ಹಾಲಿಡೇಸ್ ಇರುವುದರಿಂದ ಲೈಬ್ರರಿಗೆ ಬಂದಿದ್ದಳು. ಬಳಿಕ ಕಾಲೇಜಿನ 5 ನೇ ಮಹಡಿಗೆ ತೆರಳಿದ ರಚನಾ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ಐದನೇ ಮಹಡಿಯಿಂದ ಬಿದ್ದಿದ್ದೇ ಆಗಿದ್ದರೆ ರಚನಾ ದೇಹದಲ್ಲಿ ಗಂಭೀರ ಗಾಯಗಳಾಗಬೇಕಿತ್ತು. ಆದರೆ ಅಂತಹ ಯಾವುದೇ ಗುರುತರ ಗಾಯಗಳು ಆಕೆಯ ಮೈಮೇಲೆ ಆಗಿಲ್ಲ ಎಂದು ಹೆತ್ತವರು ಆರೋಪ ಮಾಡಿದ್ದಾರೆ.
ಮಾತ್ರವಲ್ಲದೇ ಆಕೆ ಸರಳುಗಳಿಲ್ಲದ ಕಿಟಕಿಯಿಂದ ಹಾರಿದ್ದಾಳೆ ಎಂದು ಹೇಳುತ್ತಾರೆ. ಆದರೆ ಕಾಲೇಜಿನಲ್ಲಿ ಸರಳುಗಳಿಲ್ಲದ ಕಿಟಕಿಯನ್ನು ಯಾಕೆ ಅಳವಡಿಸಿರುವುದು ಎಂದು ಪ್ರಶ್ನಿಸಿ ರಚನಾ ಪೋಷಕರು ಮೂಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದು ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮೊದಲ ಆತ್ಮಹತ್ಯೆಯೇನಲ್ಲ. ಈ ಹಿಂದೆ ಕ್ರೀಡಾ ವಿದ್ಯಾರ್ಥಿನಿ ಕಾವ್ಯಶ್ರೀ ಆತ್ಮಹತ್ಯೆ ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಕೆಲವು ದಿನಗಳ ಹಿಂದೆ ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತೇಜಸ್(16) ತನ್ನ ಜನ್ಮ ದಿನದಂದೇ (ಜನವರಿ 8) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದು ಕಾಲೇಜಿನ ವಿದ್ಯಾರ್ಥಿಗಳ ಸಾವಿನ ಸರಣಿ ನಿಲ್ಲುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
Comments are closed.