ಮನೋರಂಜನೆ

3550 ಮೆಟ್ಟಿಲೇರಿ ತಿಮ್ಮಪ್ಪನ ದರ್ಶನ ಪಡೆದ ಹರಿಪ್ರಿಯಾ

Pinterest LinkedIn Tumblr


‘ನೀರ್‌ದೋಸೆ’ ಬೆಡಗಿ ಹರಿಪ್ರಿಯಾ ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದಾದ ನಂತರ ಮತ್ತೊಂದು ಚಿತ್ರವನ್ನು ಒಪ್ಪಿಕೊಳ್ಳುತ್ತಿರುವ ಈ ಬೆಡಗಿ ಸ್ಯಾಂಡಲ್‌ವುಡ್‌ ಸೇರಿದಂತೆ ಟಾಲಿವುಡ್‌ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು, ಇದೇ ಗ್ಯಾಪಲ್ಲಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಮೊನ್ನೆಯಷ್ಟೇ ‘ಲೈಫ್‌ ಜತೆ ಒಂದ್‌ ಸೆಲ್ಫಿ’ ಚಿತ್ರಕ್ಕಾಗಿ ಹೃಷಿಕೇಷದಲ್ಲಿ ಸಾಹಸಮಯ ರಿವರ್‌ ರ‍್ಯಾಫ್ಟಿಂಗ್‌ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಚಿತ್ರಕ್ಕಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಗಂಗಾ ನದಿಯಲ್ಲಿ ರಿವರ್‌ ರ‍್ಯಾಫ್ಟಿಂಗ್‌ ಮಾಡಿದ್ದಾರೆ ಹರಿಪ್ರಿಯಾ. ‘ಲೈಫ್‌ ಜತೆ ಒಂದ್‌ ಸೆಲ್ಫಿ’ ಚಿತ್ರವನ್ನು ದಿನಕರ್‌ ತೂಗುದೀಪ್‌ ನಿರ್ದೇಶಿಸುತ್ತಿದ್ದು, ಹರಿಪ್ರಿಯಾ ಜತೆ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಹಾಗೂ ಲವ್ಲಿಸ್ಟಾರ್‌ ಪ್ರೇಮ್‌ ಅಭಿನಯಿಸಿದ್ದಾರೆ.

ಹೃಷಿಕೇಶದಲ್ಲಿ ಶೂಟಿಂಗ್‌ ಮುಗಿಸಿ ಚಿತ್ರ ತಂಡ ಬೆಂಗಳೂರಿಗೆ ವಾಪಸ್ಸಾದರೆ, ಇತ್ತ ಹರಿಪ್ರಿಯಾ ತಿರುಪತಿ ಬೆಟ್ಟವೇರಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆಯಲು ಬರೋಬ್ಬರಿ 3550 ಮೆಟ್ಟಿಲುಗಳನ್ನು ಹತ್ತಿದ್ದಾರೆ. ಮೆಟ್ಟಿಲ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವ ‘ನೀರ್‌ದೋಸೆ’ ಬೆಡಗಿ, ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅಲಿಪಿರಿಯಿಂದ 11 ಕಿ.ಮಿ ದೂರದಲ್ಲಿರುವ ತಿರುಮಲಕ್ಕೆ ಹರಿಪ್ರಿಯಾ ಕಾಲ್ನಡಿಗೆಯಲ್ಲೇ ಹೋಗಿರುವುದು ವಿಶೇಷ.

Comments are closed.