ರಾಷ್ಟ್ರೀಯ

ಹರಿಯಾಣದ ಮಾಲ್ ಧ್ವಂಸ: ಪದ್ಮಾವತ್​ ಚಿತ್ರ ಬಿಡುಗಡೆ ವಿರೋಧಿಸಿ ಕೃತ್ಯ?

Pinterest LinkedIn Tumblr


ಕುರುಕ್ಷೇತ್ರ: ವಿವಾದಗಳಿಗೆ ನಾಂದಿ ಹಾಡಿದ್ದ ಪದ್ಮಾವತ್‌ ಚಿತ್ರ ಬಿಡುಗಡೆಗೆ ಇನ್ನು ಮೂರು ದಿನವಿರುವಾಗಲೇ ಇನ್ನೊಂದು ವಾರವಿರುವಾಗಲೇ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಹರಿಯಾಣದ ಮಾಲ್‌ವೊಂದನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿದೆ.

ಮಾಲ್‌ಗೆ ನುಗ್ಗಿದ ತಂಡವೊಂದು ಮೊದಲಿಗೆ ಕೆಲವೆಡೆ ಬೆಂಕಿಯನ್ನು ಹಚ್ಚಿ ಸುತ್ತಿಗೆ ಮತ್ತು ಕತ್ತಿಗಳಿಂದ ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪದ್ಮಾವತ್‌ ಚಿತ್ರ ಬಿಡುಗಡೆ ವಿರೋಧಿಸಿ ನಡೆದಿರುವ ದಾಳಿ ಎಂದು ಶಂಕಿಸಲಾಗಿದ್ದು, ಸುಮಾರು 20-22 ಜನರ ಗುಂಪು ಭಾನುವಾರ ಸಂಜೆ 6.48ರ ವೇಳೆ ಏಕಾಏಕಿ ಮಾಲ್‌ಗೆ ನುಗ್ಗಿ ಮಾಲ್‌ನ್ನು ಧ್ವಂಸ ಮಾಡಿ ಒಂದು ಮಾತನ್ನು ಆಡದೆ ಅಲ್ಲಿಂದ ಕಾಲ್ಕಿತ್ತಿದೆ. ಅದರಲ್ಲಿ ಕೆಲವರನ್ನು ಗುರುತಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಪದ್ಮಾವತ್‌ ಚಿತ್ರ ಬಿಡುಗಡೆಯನ್ನು ನಿಷೇಧಿಸುವಂತೆ ಮಧ್ಯಪ್ರದೇಶ, ಹರಿಯಾರ್ಯಾಣ, ರಾಜಸ್ತಾನ ಮತ್ತು ಗುಜರಾತ್‌ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದವು. ಆದರೆ, ಜ.25ರಂದು ದೇಶದಾದ್ಯಂತ ಪದ್ಮಾವತ್‌ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಮರುಪರಿಶೀಲಿಸುವಂತೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರ್ಕಾರ ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿವೆ.

ಜನವರಿ 25ರಂದು ಪದ್ಮಾವತ್‌ ಚಿತ್ರ ದೇಶಾದ್ಯಂತ ಹಿಂದಿ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗಲಿದೆ.

Comments are closed.