ಮನೋರಂಜನೆ

2018ನೇ ಸಾಲಿನ 63ನೇ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು; ಇರ್ಫಾನ್ ಖಾನ್ ಗೆ ಅತ್ಯುತ್ತಮ ನಟ- ವಿದ್ಯಾ ಬಾಲನ್ ಉತ್ತಮ ನಟಿ

Pinterest LinkedIn Tumblr

ಮುಂಬೈ: ಕಳೆದ ರಾತ್ರಿ ನಗರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2018ನೇ ಸಾಲಿನ 63ನೇ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿ ಘೋಷಿಸಲಾಯಿತು. 2017ನೇ ಸಾಲಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳಿಗೆ ನೀಡಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ನ ನಟ-ನಟಿಯರು ಸಮಾಗಮವಾಗಿದ್ದರು. ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಕಾರ್ಯಕ್ರಮವನ್ನು ನಿರೂಪಿಸಿದರು.

2017ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಹಿಂದಿ ಮೀಡಿಯಂ ಭಾಜನವಾದರೆ ಆ ಚಿತ್ರದ ನಟ ಇರ್ಫಾನ್ ಖಾನ್ ಗೆ ಅತ್ಯುತ್ತಮ ನಟ ಹಾಗೂ ವಿದ್ಯಾ ಬಾಲನ್ ಅವರ ತುಮ್ಹಾರಿ ಸುಲು ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಉತ್ತಮ ನಟಿ ಪ್ರಶಸ್ತಿ ಗಳಿಸಿಕೊಂಡಿತು. ಬರೇಲಿ ಕಿ ಬರ್ಫಿ ಚಿತ್ರದ ನಿರ್ದೇಶನಕ್ಕೆ ಅಶ್ವಿನಿ ಐಯ್ಯರ್ ತಿವಾರಿಗೆ ಉತ್ತಮ ನಿರ್ದೇಶಕಿ ಪ್ರಶಸ್ತಿ ಲಭಿಸಿತು.

63ನೇ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿಯ ಪಟ್ಟಿ ಇಂತಿದೆ:
ಹಿಂದಿ ಮೀಡಿಯಂ-ಅತ್ಯುತ್ತಮ ಚಿತ್ರ
ವಿಮರ್ಶಕರ ಅತ್ಯುತ್ತಮ ಚಿತ್ರ: ನ್ಯೂಟನ್
ಅತ್ಯುತ್ತಮ ನಟ: ಇರ್ಫಾನ್ ಖಾನ್, ಹಿಂದಿ ಮೀಡಿಯಂ
ಅತ್ಯುತ್ತಮ ನಟಿ: ವಿದ್ಯಾ ಬಾಲನ್, ತುಮ್ಹಾರಿ ಸುಲು
ವಿಮರ್ಶಕರ ಅತ್ಯುತ್ತಮ ನಟ-ಟ್ರಾಪ್ಪ್ ಡ್ ಚಿತ್ರದ ನಟನೆಗೆ ರಾಜಕುಮಾರ್ ರಾವ್
ವಿಮರ್ಶಕರ ಅತ್ಯುತ್ತಮ ನಟಿ: ಸೀಕ್ರೆಟ್ ಸೂರಪ್ ಸ್ಟಾರ್ ಜೈರಾ ವಾಸಿಮ್

ಉತ್ತಮ ನಿರ್ದೇಶಕ:ಬರೇಲಿ ಕಿ ಬರ್ಫಿ ಚಿತ್ರಕ್ಕೆ ಅಶ್ವಿನಿ ಐಯ್ಯರ್ ತಿವಾರಿ
ಉತ್ತಮ ಚೊಚ್ಚಲ ನಿರ್ದೇಶಕಿ: ಎ ಡೆತ್ ಇನ್ ದ ಗುಂಜ್ ಸಿನಿಮಾಕ್ಕೆ ಕೊಂಕಣ ಸೇನ್ ಶರ್ಮ
ಅತ್ಯುತ್ತಮ ಪೋಷಕ ನಟ:ರಾಜ್ ಕುಮಾರ್ ರಾವ್-ಬರೇಲಿ ಕಿ ಬರ್ಫಿ
ಅತ್ಯುತ್ತಮ ಪೋಷಕ ನಟಿ: ಮೆಹೆರ್ ವಿಜ್ ಸೀಕ್ರೆಟ್ ಸೂಪರ್ ಸ್ಟಾರ್
ಅತ್ಯುತ್ತಮ ಕಿರು ಚಿತ್ರ ನಟ: ಖಜ್ಲಿ ಚಿತ್ರಕ್ಕೆ ಜಾಕಿಶ್ರಾಫ್
ಅತ್ಯುತ್ತಮ ಕಿರು ಚಿತ್ರ ನಟಿ:ಜ್ಯೂಸ್ ಚಿತ್ರಕ್ಕೆ ಶೆಫಾಲಿ ಶ್ಹಾ
ಅತ್ಯುತ್ತಮ ಕಿರುಚಿತ್ರ:ಜ್ಯೂಸ್
ಅತ್ಯುತ್ತಮ ಸಂಗೀತ ಆಲ್ಬಂ:ಜಗ್ಗಾ ಜಸೂಸ್ ನಲ್ಲಿ ಪ್ರೀತಮ್

Comments are closed.